ನಿಜಗುಣ ಶ್ರೀಗಳ ಜಯಂತೋತ್ಸವ, ಪ್ರಶಸ್ತಿ ಪ್ರಧಾನ

ಹುಬ್ಬಳ್ಳಿ ನ 19 – ನಗರದ  ಶ್ರಿ ನಿಜಗುಣ ಶಿವಯೋಗಿಗಳವರ ಶ್ರೀ ರುದ್ರಾಕ್ಷಿಮಠದಲ್ಲಿ ೭೧ ನೇ ವಾರ್ಷಿಕ ಜಯಂತಿ ಉತ್ಸವ ಹಾಗೂ ಶ್ರೀ ನಿಜಗುಣರ ಪ್ರಶಸ್ತಿ ಪ್ರಧಾನ ಸಮಾರಂಭವು ದಿ.೧೫ ರಿಂದ ಈಗಾಗಲೇ   ಆರಂಭವಾಗಿದ್ದು ಇದೇ ೨೨ ರ ವರೆಗೆ    ಜರುಗಲಿದೆ.
ಕಾರ್ಯಕ್ರಮದ ನೇತೃತ್ವವನ್ನು  ಹುಬ್ಬಳ್ಳಿ-ಬೈಲಹೊಂಗಲದ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದು, ಕಲಬುರ್ಗಿ   ಹೊಸಮಠದ ಶ್ರೀ ಚನ್ನಮಲ್ಲ ಸ್ವಾಮಿಗಳು  ಪ್ರವಚನ ನಡೆಸಿಕೊಡಲಿದ್ದಾರೆ.
ನಾಳೆ ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು  ಶಿವಮೊಗ್ಗದ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರಾಘಾರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು,
ಹುಬ್ಬಳ್ಳಿ ಎರಡತ್ತಿನ ಮಠದ  ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು  ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಗಣ್ಯರು ಆಗಮಿಸಲಿದ್ದಾರೆ.
ದಿ. ೨೧ ರಂದು   ನಡೆಯುವ ಕಾರ್ಯಕ್ರಮಕ್ಕೆ   ಮೂರುಸಾವಿರ ಮಠದ   ಶ್ರೀ ಜಗದ್ಗುರು ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ನವಿಲಗುಂದ ಗವಿಮಠದ ಶ್ರೀ ಅಭಿನವ ಬಸವಲಿಂಗ ಸ್ವಾಮಿಗಳು  ಅಧ್ಯಕ್ಷತೆ ವಹಿಸಲಿದ್ದಾರೆ.
ನಾಡೋಜ್ ಪಾಟೀಲ್ ಪುಟ್ಟಪ್ಪ  ಅವರಿಗೆ  ಶ್ರೀ ನಿಜಗುಣ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಗುವುದು, ಶಾಸಕರಾದ ಪ್ರಸಾದ್ ಅಬ್ಬಯ್ಯ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದು,  ಮಹಾ ಪ್ರಸಾದ ಹಮ್ಮಿಕೊಳ್ಳಲಾಗಿರುತ್ತದೆ.
ಸಂಜೆ ಕಾರ್ಯಕ್ರಮದಲ್ಲಿ  ಧಾರವಾಡದ ಮುರುಘಾಮಠದ  ಮಲ್ಲಿಕಾರ್ಜುನ ಸ್ವಾಮಿಗಳು  ಸಾನಿಧ್ಯ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು  ಶ್ರೀ ಚನ್ನಬಸವ ದೇಶಿಕೇಂದ್ರ ವಹಿಸಲಿದ್ದಾರೆ.
ದಿ. ೨೨ ರಂದು  ಶ್ರೀ ಬಸವಲಿಂಗ ‌ಮಹಾ ಶಿವಯೋಗಿಗಳ ಕರ್ತೃ ಗದ್ದುಗೆ ದೀಪೋತ್ಸವ ಜರುಗಲಿದೆ.
ಧಾರವಾಡದ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಲಿಂ. ಶ್ರೀಮತಿ  ಕಾಮಾಕ್ಷಮ್ಮ ಚನ್ನವೀರಸ್ವಾಮಿ ಚಿಕ್ಕಮಠ  ಹಾಗೂ ಲಿಂ. ವೇದಮೂರ್ತಿ  ಚನ್ನವೀರಸ್ವಾಮಿ ಚಿಕ್ಕಮಠ  ದತ್ತಿ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ   ಸಾನಿಧ್ಯವನ್ನು  ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಸ್ವಾಮಿಗಳು  ಹಾಗೂ ಅಕ್ಕಿ-ಆಲೂರು ವಿರಕ್ತಮಠದ ಶ್ರೀ ಬಸವ ಸ್ವಾಮಿಗಳು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಲಿಂಗರಾಜ ಅಂಗಡಿ  ವಹಿಸಲಿದ್ದಾರೆ.
ದಿ. ೨೧ ರಂದು  ವಿವಿಧ ಕಾರ್ಯಕ್ರಮಗಳೊಂದಿಗೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Leave a Comment