ನಿಗದಿತ ಸಮಯದಲ್ಲಿ ಟೋಕಿಯೊ ಒಲಿಂಪಿಕ್ಸ್

ನವದೆಹಲಿ, ಫೆ.26 -ಕೊರೋನ್ ವೈರಸ್ ಭೀತಿ ಜನರನ್ನು ನಿದ್ದೆ ಗೆಡಿಸಿದೆ. ಚೀನಾ ಸೇರಿದಂತೆ 20 ದೇಶಗಳಲ್ಲಿ ಮಹಾಮಾರಿ ರೋಗಕ್ಕೆ ಜನ ತತ್ತರಿಸಿದ್ದಾರೆ. ಈ ರೋಗದ ಕರಿ ನೆರಳು ಜುಲೈನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡೆಯ ಮೇಲೂ ಬಿದ್ದಿದೆ. ಆದರೆ ಈ ಬಗ್ಗೆ ಸ್ಪಷ್ಟ ಪಡಿಸಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ವಕ್ತಾರರು ಈ ಆಟಗಳ ಸಿದ್ಧತೆಗಳು ಯೋಜನೆಯ ಪ್ರಕಾರ ನಡೆಯುತ್ತಿವೆ ಎಂದು ಹೇಳಿದ್ದಾರೆ.

“ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿಯು ಐಒಸಿ ಮತ್ತು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ಒಲಿಂಪಿಕ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕ್ರೀಡೆಗಳಲ್ಲಿ ಕೊರೋನಾಸ್ ವೈರಸ್ ಬಿಕ್ಕಟ್ಟಿನ ಬಗ್ಗೆ ಈ ಸಮಯದಲ್ಲಿ ಕೇಳಿಬಂದಿರುವ ಸುದ್ದಿಗಳೆಲ್ಲವು ಕೇವಲ .ಹಾಪೋಹಗಳು” ಎಂದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಜುಲೈ 24 ರಿಂದ ಆಗಸ್ಟ್ 9 ರವರೆಗೆ ಮತ್ತು ಪ್ಯಾರಾಲಿಂಪಿಕ್ಸ್ ಆಗಸ್ಟ್ 25 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದೆ.

“2020 ರ ಒಲಿಂಪಿಕ್ ಕ್ರೀಡಾಕೂಟದ ಯಶಸ್ವಿ ಸಂಘಟನೆಯತ್ತ ಐಒಸಿ ಕಾರ್ಯನಿರ್ವಹಿಸುತ್ತಿದೆ ಎಂದು ಡಿಕ್ ಪೌಂಡ್ ಸ್ಪಷ್ಟವಾಗಿ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಸಿದ್ಧತೆಗಳು ಯೋಜಿಸಿದಂತೆ ನಡೆಯುತ್ತಿವೆ ಎಂದು ನಾವು ಐಒಸಿ ಪರವಾಗಿ ಪುನರುಚ್ಚರಿಸುತ್ತೇವೆ” ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು ಟೋಕಿಯೊ ಒಲಿಂಪಿಕ್ಸ್‌ನ ಸಿದ್ಧತೆಗಳ ಒಂದು ಪ್ರಮುಖ ಭಾಗವಾಗಲಿದ್ದು ಇದರಿಂದ ಸುರಕ್ಷಿತ ಆಟಗಳನ್ನು ಆಯೋಜಿಸಲು ಸಹಾಯಕಾರಿ. ಟೋಕಿಯೋ 2020 ಎಲ್ಲಾ ಸಂಬಂಧ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಮುಂದುವರಿಸಲಿದೆ ಮತ್ತು ಈ ಸೋಂಕಿತ ರೋಗವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳೊಂದಿಗೆ ಅಗತ್ಯವಿರುವ ಕ್ರಮಗಳನ್ನು ನಾವು ಪರಿಶೀಲಿಸುತ್ತಲೇ ಇರುತ್ತೇವೆ” ಎಂದು ಹೇಳಿದ್ದಾರೆ.

Leave a Comment