ನಿಂತಿದ್ದ ಲಾರಿಗೆ ಕಾರ್‌ ಡಿಕ್ಕಿ

ಓರ್ವ ಮೃತ್ಯು: ಹಲವರಿಗೆ ಗಾಯ

ಮಂಗಳೂರು, ಮೇ 31- ರಾ.ಹೆ.66ರ ಜಪ್ಪಿನಮೊಗರು ಸಮೀಪ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ. ಈ ಪೈಕಿ ಓರ್ವ ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಮೃತವ್ಯಕ್ತಿ ಮತ್ತು ಗಾಯಾಳುಗಳ ಹೆಸರು ತಿಳಿದು ಬಂದಿಲ್ಲ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಸಮೀಪ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರು ಲಾರಿಯಡಿ ಸಿಲುಕಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟರು ಮತ್ತು ಗಾಯಾಳು ಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ಇಲ್ಲಿನ ಠಾಣೆ ಪೊಲೀಸರು ತಿಳಿಸಿದ್ದಾರೆ. ಎಲ್ಲರೂ ಕಾವೂರಿನ ಗಾಂಧಿನಗರದವರು ಎನ್ನಲಾಗಿದೆ. ಮೆಹೆಂದಿ ಕಾರ್ಯಕ್ರಮಕ್ಕೆ ಎಂದು ಮನೆಯಿಂದ ನಾಲ್ಕು ಮಂದಿ ಹೊರಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮನೆಯಿಂದ ಕಾಲ್‌ ಮಾಡುವಾಗ ಮೊಬೈಲ್‌ ನಾಟ್‌ ರೀಚೇಬಲ್‌ ಎಂದು ಬರುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

Share

Leave a Comment