ನಿಂಚನ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ದಾವಣಗೆರೆ.ಏ.16- ನಗರದ ನಿಂಚನ ಪಬ್ಲಿಕ್ ಶಾಲೆಯಲ್ಲಿ ಡಾ,ಬಿ.ಆರ್ ಅಂಬೇಡ್ಕರ್‍ರವರ 128ನೇ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ವರ್ಷದ ಸಾಲಿನ ಶಾಲಾ ತರಗತಿಗಳ ಮಕ್ಕಳಿಗೆ ಮತ್ತು ಪೋಷಕರುಗಳಿಗೆ ಮತ್ತು ಆಡಳಿತವರ್ಗದವರಿಗೆ ಔತಣಕೂಟದ ಸಮಾರಂಭ ನಡೆಯಿತು.ಕಾರ್ಯಕ್ರಮವನ್ನು ಶಾಲೆಯಾ ಸಂಸ್ಥಾಪಕ ಅಧ್ಯಕ್ಷರಾದ ಎಸ್.ನಿಂಗಪ್ಪನವರು ಉದ್ಘಾಟಿಸಿ ಮಾತನಾಡಿದರು ಅಂಬೇಡ್ಕರ್‍ರವರು ಶೋಷಿತರ ಬದುಕನ್ನು ಕಟ್ಟಿಕೊಡಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಡಾ. ಅಂಬೇಡ್ಕರ್‍ರವರು ಜಾತ್ಯತೀತ, ಸಮಾಜವಾದ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದ್ದರು ಎಂದು ತಿಳಿಸಿದರಲ್ಲದೇ, ಅಗಾಧ ಪಾಂಡಿತ್ಯವನ್ನು ಉಳ್ಳವರಾಗಿದ್ದರು ಹಾಗೂ ನಿರಂತರ ಅಧ್ಯಯನಶೀಲರಾಗಿದ್ದರು. ಆದುದರಿಂದಲೇ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದರು. ಇಂತಹಮಹಾನ್ ನಾಯಕರುಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಹೇಳಿದರು.ಶಿಕ್ಷಣ ಇಲಾಖೆಯ ಜೆ.ಆರ್.ಶಿವಲಿಂಗಪ್ಪ ಮಾತನಾಡಿ ಅಂಬೇಡ್ಕರ್ ಸಾಕಷ್ಟು ನೊವುಂಡು ಜೀವನಸಾಗಿಸಿದ್ದಾರೆ ಅವರಿಗೊಸ್ಕರ ಬದುಕಲಿಲ್ಲಾ ಸಮಾಜಕ್ಕೆ ತಮ್ಮ ಜೀವನವನ್ನೆ ಮುಡುಪಾಗಿಟ್ಟವರು ಅವರು ನೀಡಿದ ಸಂವಿಧಾನದಿಂದಲೇ ಇಂದು ಸಮಾನತೆಯಲ್ಲಿ ನಾವು ಬದುಕುತ್ತಿರುವುದು ಎಂದು ಹೇಳಿದರು.ಸಮಾರಂಭದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಚಂದ್ರಕಲಾ ಎಸ್.ನಿಂಗಪ್ಪ,ಜಯಲಕ್ಷ್ಮಮ್ಮ,ಪ್ರಾಂಶುಪಾಲರಾದಮಾಲಾ ಮುಖ್ಯೋಪಾಧ್ಯರಾದ ರೇವಣ್ಣಸಿದ್ದಪ್ಪ ಉಪಸ್ಥಿತರಿದ್ದರು.

Leave a Comment