ನಾಸಿಕ್ ನ ಈರುಳ್ಳಿ ವರ್ತಕರ ಮೇಲೆ ಐಟಿ ದಾಳಿ

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮಳೆ, ಪ್ರವಾಹ ಉಂಟಾಗಿದ್ದರಿಂದ ಈರುಳ್ಳಿ ಕೊರತೆ ಸೃಷ್ಟಿಯಾಗಿದೆ. ಇನ್ನುಕೇಂದ್ರ ಸರ್ಕಾರದ ಏಜೆನ್ಸಿಯಾದ ಎಂಎಂಟಿಸಿ ನ.7ರಂದು 1 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಆದರೂ ಈರುಳ್ಳಿ ದರ ಮಾತ್ರ ಕಡಿಮೆಯಾಗಿಲ್ಲ. ಸದ್ಯದ ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಡಿಸೆಂಬರ್ ನಲ್ಲೂ ಈರುಳ್ಳಿ ದರ ದುಬಾರಿಯಾಗೇ ಇರಲಿದೆ…

 

ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಆವಕ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಕೆಜಿಗೆ 100 ರೂ.ನಂತೆ ಮಾರಾಟವಾಗುತ್ತಿದೆ. ಹೀಗಿರುವಾಗಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈರುಳ್ಳಿ ವರ್ತಕರ ಮೇಲೆ ದಾಳಿ ಮಾಡಲಾರಂಭಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಕಚೇರಿಗಳ ಮೂಲಗಳ ಪ್ರಕಾರ ಹಲವು ದಿನಗಳಿಂದ ದೇಶದಾದ್ಯಂತ ಇಂಥ ದಾಳಿಗಳು ಮಾಡಲಾಗುತ್ತಿದೆ. ಸದ್ಯ ಪಂಜಾಬ್ನಲ್ಲಿ ದಾಳಿ ನಡೆಸಲಾಗುತ್ತಿದ್ದು, ಈರುಳ್ಳಿಯನ್ನು ಕಳ್ಳದಾಸ್ತಾನು ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಸೆಪ್ಟೆಂಬರ್ನಲ್ಲಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿಯ ಆವಕ ಹೆಚ್ಚಾಗಿತ್ತು. ಇದರಿಂದಾಗಿ ಆಗ ಕೆಜಿಗೆ 80 ರೂ.ನಂತೆ ಮಾರಾಟವಾಗುತ್ತಿದ್ದ ಈರುಳ್ಳಿ ದರ ಸ್ವಲ್ಪ ಕಡಿಮೆಯಾಗಿತ್ತು. ಅಕ್ಟೋಬರ್ನಲ್ಲೂ ದರಗಳು ಕಡಿಮೆಯಾಗಿದ್ದವು. ಆದರೆ, ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಾಗಿ ಈರುಳ್ಳಿ ಫಸಲು ಹಾಳಾಗಿದ್ದರಿಂದ, ನವೆಂಬರ್ನಿಂದ ಈರುಳ್ಳಿ ಬೆಲೆ ಹೆಚ್ಚಾಗಲಾರಂಭಿಸಿದೆ. ದೆಹಲಿ ಸೇರಿ ದೇಶದ ನಾನಾ ಭಾಗಗಳಲ್ಲಿ ಕೆಜಿಗೆ 80ರಿಂದ 100 ರೂ.ನಂತೆ ಮಾರಾಟವಾಗುತ್ತಿದೆ.

Leave a Comment