ನಾಸಾ ಸೇನಾ ಸಂಪರ್ಕ ಉಪಗ್ರಹ ಉಡಾವಣೆ

ಉತ್ತನೂರು ವೆಂಕಟೇಶ್

ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಕ್ಟೋಬರ್ ೧೭ರಂದು ಸೇನಾಸಾ  ಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ .ದಕ್ಸೂಚಿ ಮತ್ತು ಮಾಹಿತಿ ರವಾನೆ ಉಪಗ್ರಹ ಡಟಿಆರೆಸ್-ಎಂ ಹೆಸರಿನ ಒಪಗ್ರಹವನ್ನು  ೧೭ ರ ರಾತ್ರಿ ಫ್ಲಾರಿಡಾದ  ಕೆಪ್ ಕಾನರವೆಲ್ ವಾಯುನೆಲೆಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

ಯುನೈಟೆಡ್ ಲಾಂಚ್ ಅಲಿಯನ್ಸ್ (ಎಎಲ್ ಎ) ನ ರಾಕೆಟ್‌ಅಟ್ಲಾಸ್-ವಿ ಬೆನ್ನೇರಿ ನಭಕ್ಕೆ ಜಿಗಿದ ಉಪಗ್ರಹ ನಿಗಧಿತ ಅವಧಿ ಯಲ್ಲಿ ಕಕ್ಷೆ  ಸೇರಿದೆ. ಮುಂದಿನ ವರ್ಷದಿಂದ ಈ ಉಪಗ್ರಹದ ಮಾಹಿತಿಯನ್ನು ಸೇನೆ ಬಳಸಿಕೊಳ್ಳಲಿದೆ . ಅದಕ್ಕೂ ಮೊದಲು ನಾಲಕ್ಕು ತಿಂಗಳ ಅವಧಿಯಲ್ಲಿ ಅದರ ಮಾಹಿತಿ ರವಾನೆ ಮತ್ತು ಕಾರ್ಯನಿರ್ವಹಣೆ ಕುರಿತಂತೆ ಇನ್ನಷ್ಟು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ನಾಸಾ  ವಿಜ್ಞಾನಿಗಳು ಹೇಳಿದ್ದಾರೆ.

21vichar2

ಮುಂದಿ ತಲೆಮಾರಿನ ಸೇನಾ ಸಂಪರ್ಕ ಉಪಗ್ರಹ ಉಡಾವಣಾ ಸರಣಿಯ ಮೂರನೇ ಹಾಗೂ ಅಂತಿಮ ಉಪಗ್ರಹ ಇದಾಗಿದೆ. ಇದರ ಮುಖ್ಯ ಉದ್ದೇಶ ಸೇನೇಗಾಗಿ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ,ದಿಕ್ಸೂಚಿಗೆ ನೆರವುನಿಡುವುದು, ಮತ್ತು ಸೇನಾ ಕಾರ್ಯಾಚರಣೆಗೆ ರಕ್ಷಿತ ಮಾಹಿತಿ ಒದಗಿಸುವುದು ಅಗಿದೆ. ಅಮೇರಿಕಾ ಸಶಸ್ತ್ರ ಪಡೆಗಳಿಗೆ ರಕ್ಷಣಾತ್ಮಕ ದೃಷ್ಟಿಯಿಂದ ಈ ಸೇನಾ ಸಂಪರ್ಕ ಉಪಗ್ರಹಗಳ ಮಾಹಿತಿ ಪ್ರಮುಖವಾಗಿದ್ದು ವಿಶೇಷವಾಗಿ ವೀದೇಶಿ ನೆಲೆಗಳಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಈ ಸಂಪರ್ಕ ಉಪಗ್ರಹಗಳು ಸೇನೆU ಒದಗಿಸುವ  ಮಾಹಿತಿ ಅತಿ ಉಪಯುಕ್ತ. ಸೇನಾ ಕಾರ್ಯಾ ಚರಣೆಗೆ ಅಗತ್ಯ ಮಾಹಿತಿಯನ್ನು, ಶತೃಪಾಳೆಯದ ನೆಲೆಗಳು ,ಶತೃ ದೇಶಗಳು ಉಡಾವಣೆ ಮಾಡುವ ಕ್ಷಿಪಣಿಗಳ ಕುರಿತಂತೆ ಮುನ್ನೆಚ್ಚರಿಕೆಯನ್ನು ಈ ಉಪಗ್ರಹಗಳು ನೀಡುವುದರಿಂದ ಅಮೇರಿಕಾ ಪಡೆಗಳು ತನ್ನ ಪ್ರತಿ ಕಾರ್ಯಾಚರಣೆ ಹೆಚ್ಚಿನ ಅನುಕೂಲ ವಾಗುತ್ತದೆ. ಈ ಸರಣಿಯಲ್ಲಿಯ ಮೊದಮತ್ತು ಎರಡನೆ ಉಪಗ್ರಹಗಳನ್ನು ೨೦೧೩ ಮತ್ತು ೨೦೧೪ ರಲ್ಲಿ ಉಡಾವಣೆ ಮಾಡಲಾಗಿದೆ.

ಶತೃ ಪಾಲಯದಿಂದ ಎದುರಾಗುವ ಕ್ಷಿಪಣಿ ಯುದ್ಧ ವಿಮಾನದಂತಹ  ದಾಳಿಗಳಿಂದ ರಕ್ಷಣೆ ಪಡೆಯುವ ಮತ್ತು ನಿಖರ ಪ್ರತಿದಾಳಿಗೆ ಅಗತ್ಯವಿರು ಮಾಹಿತಿ ಒದಗಿಸುವ ಈ ಉಪಗ್ರಹದ ಅಭಿವೃದ್ಧಿ ಮತ್ತು ನಿರ್ಮಾಣವನ್ನು ಅಮೇರಿಕಾದ ರಕ್ಷಣಾ ಉಪಕರಣ ಮತ್ತು ಯುದ್ದ ವಿಮಾನ ತಯಾತರಿಕಾ ಸಂಸ್ಥೆಯಾದ ಲಾಕಿಡ್ ಮಾರ್ಟಿನ್ ಮಾಡಿದೆ .೧.೮ ಶತಕೋಟಿಮೊತ್ತದ ಈಉಪಗ್ರಹ ಯೋಜನೆಯಲ್ಲಿ ಅಮೆರಿಕಾ ರಕ್ಷಣ ಇಲಾಖೆ  ಹಲವಾರು ವಿದೇಶಿ ರಕ್ಷಣಾ ಇಲಾಖೆಗಳ ಪಾಲು ದಾರಿಕೆ ಪಡೆದಿದೆ.

ಆಧುನಿಕ ಸೇನಾ  ಕಾರ್ಯಾಚರಣೆಗೆ ಶಸ್ತ್ರಾಸ್ತ್ರಗಳಿಗಿಂತ ಶತೃ ಪಾಳೆಯ  ಚಲನವಲನ ಮತ್ತು ಕಾರ್ಯಾಚರಣೆ ಕುರಿತ ಮಾಹಿತಿ ಅತ್ಯಗತ್ಯ. ಇಂತಹ ಮಾಹಿತಿ ಸಂಗ್ರಹಕ್ಕಾಗಿ  ಅಮೇರಿಕಾ ಸೇನಾ ಪಡೆಗಳು ಸೇನಾ ಉಪಗ್ರಹಳ  ಸೇವೇಯನ್ನು ಬಳಸಿಕೊಳ್ಳುತ್ತ ಬಂದಿದೆ.

ಮೂರನೇ ತಲೆಮಾರಿನ ಸಂಪರ್ಕ ಸೇನಾ ಉಪಗ್ರಹಗಳ ಸರಣಿಯ ಮೂರನೇ  ಉಪಗ್ರಹವನ್ನು  ಮೊನ್ನೆ ಬುಧುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಡಾವಣೆ ಗೊಂಡಿರುವ ಉಪಗ್ರಹದ ಮಾಹಿತಿ ಸೇವೆಯನ್ನು ಅಮೆರಿಕಾ ಸೇನಾ ಪಡೆಗಳು ಮುಂದಿನ ವರ್ಷದಿಂದ  ಈಉಪಗಹದ ಸೇವೆಯನ್ನು  ಬಲಸಿಕೊಳ್ಳುತ್ತಿದ್ದು ಅದಕ್ಕೂ ಮುನ್ನ ಇನ್ನಷ್ಟು ಪರೀಕ್ಷೆಗಳಿಗೆ  ಈ ಉಪಗ್ರಹವನ್ನು ಒಳಪಡಿಸಲಾಗುವುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

Leave a Comment