ನಾವು ಸಂಕಷ್ಟದಲ್ಲಿದ್ದೇವೆ”: ರಾಹುಲ್ ಬಳಿ ಕಣ್ಣೀರಿಟ್ಟ ಕಾಶ್ಮೀರಿ ಮಹಿಳೆ

ಹೊಸದಿಲ್ಲಿ, ಆ.25: ಶ್ರೀನಗರ ವಿಮಾನ ನಿಲ್ದಾಣದಿಂದ ರಾಹುಲ್ ಗಾಂಧಿ ನೇತೃತ್ವದ ವಿಪಕ್ಷ ನಿಯೋಗವನ್ನು ವಾಪಸ್ ಕಳುಹಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಕಾಶ್ಮೀರಿ ಮಹಿಳೆಯೊಬ್ಬರು ರಾಜ್ಯದಲ್ಲಿ ತಮ್ಮ ಪರಿಸ್ಥಿತಿಯನ್ನು ರಾಹುಲ್ ರಿಗೆ ವಿವರಿಸುತ್ತಾ ಕಣ್ಣೀರಿಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ರಾಜ್ಯದಲ್ಲಿ ವಿಧಿಸಿರುವ ನಿರ್ಬಂಧದಿಂದ ಜಮ್ಮು ಕಾಶ್ಮೀರದಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಹಿಳೆ ಹೇಳುತ್ತಾರೆ. ‘ಮನೆಗಳಿಂದ ಹೊರಹೋಗಲು ನಮ್ಮ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ನನ್ನ ಸಹೋದರ ಹೃದ್ರೋಗಿ. 10 ದಿನಗಳಿಂದ ಅವರಿಗೆ ವೈದ್ಯರನ್ನು ನೋಡಲು ಸಾಧ್ಯವಾಗಿಲ್ಲ. ನಾನು ಸಂಕಷ್ಟದಲ್ಲಿದ್ದೇವೆ’ ಎಂದು ಮಹಿಳೆ ಅಳುತ್ತಾ ಹೇಳುತ್ತಾರೆ.

ಈ ವಿಡಿಯೋ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ‘ಇದು ಇನ್ನೆಷ್ಟು ದಿನ ಮುಂದುವರಿಯುತ್ತದೆ?, ಕಾಶ್ಮೀರದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಜಾಪ್ರಭುತ್ವ ಹಕ್ಕುಗಳನ್ನು ಮುಚ್ಚುವುದಕ್ಕಿಂತ ಹೆಚ್ಚು ‘ರಾಜಕೀಯ’ ಹಾಗೂ ‘ರಾಷ್ಟ್ರವಿರೋಧಿ’ಕೃತ್ಯ ಮತ್ತೊಂದಿಲ್ಲ. ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬರ ಕರ್ತವ್ಯ. ನಾವು ಹಾಗೆ ಮಾಡುವುದನ್ನು ನಿಲ್ಲಿಸುವುದಿಲ್ಲ” ಎಂದಿದ್ದಾರೆ.ಶ್ರೀನಗರ.ಆ.೨೫. ಕಾಶ್ಮೀರ ಕಣಿವೆ ರಾಜ್ಯದಲ್ಲಿ ಔಷಧಿ ಮತ್ತು ಅಗತ್ಯ ವಸ್ತುಗಳ ಅಭಾವ ಇದೆ ಎಂಬ ಸುದ್ದಿಯನ್ನು ದ ಗವರ್ನರ್ ಸತ್ಯ ಪಾಲ್ ಮಲಿಕ್ ನಿರಾಕರಿಸಿದ್ದಾರೆ.

Leave a Comment