ನಾಳೆ ಸಮಾವೇಶ: ಓವೈಸಿ ನಗರಕ್ಕೆ

ಕಲಬುರಗಿ ಫೆ 14: ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮಿನ್ ( ಎಐಎಂಐಎಂ ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರು ನಾಳೆ (ಫೆಬ್ರವರಿ.15 ) ಕಲಬುರಗಿ ನಗರಕ್ಕೆ ಆಗಮಿಸುವರು.

ಸಂಜೆ 6 ಗಂಟೆಗೆ ನಗರದ ಹಾಗರಗಾ ಕ್ರಾಸ್ ಬಳಿ ಇರುವ ಪೀರ್ ಬಂಗಾಲಿ ಮೈದಾನದಲ್ಲಿ  ಸಿಎಎ ,ಎನ್‍ಆರ್‍ಸಿ ಮತ್ತು ಎನ್‍ಪಿಆರ್ ವಿರೋಧಿ ಸಮಾವೇಶದಲ್ಲಿ  ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡುವರು ಎಂದು ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ರಹೀಮ್ (ಮಿರ್ಚಿ ಸೇಟ್) ಮತ್ತು ಮೊಹಮ್ಮದ್ ಮೈನೂದ್ದೀನ್ ಅವರು ಇಂದು           ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್, ಮುಖಂಡರಾದ ವಾರೀಸ್ ಪಠಾಣ,ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ ಗನಿ ಹುಮನಾಬಾದಿ , ಸೇರಿದಂತೆ ಎಐಎಂಐಎಂ ಪಕ್ಷದ ಅನೇಕ ಮುಖಂಡರು ಮತ್ತು  ಎಸ್‍ಡಿಪಿಐ ,ಮುಸ್ಲೀಂಲೀಗ್ ,  ಪಕ್ಷದ ಮುಖಂಡರು ಭಾಗವಹಿಸುವರು.ಸುಮಾರು 15 ರಿಂದ 20 ಸಾವಿರ ಜನ ಸಮಾವೇಶದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಯುನೂಸ್ ಉಪಸ್ಥಿತರಿದ್ದರು..

Leave a Comment