ನಾಳೆ ಸಂಪೂರ್ಣ ಸೂರ್ಯ ಗ್ರಹಣ

ನಾಳೆ (ಆ.21) ಸಂಪೂರ್ಣ ಸೂರ್ಯ ಗ್ರಹಣ. 99 ವರ್ಷಗಳ ನಂತರ ಈ ರೀತಿಯ ಸಂಪೂರ್ಣ ಗ್ರಹಣ ಸಂಭವಿಸುತ್ತಿರುವ ಈ ಅಪರೂಪದ ಗ್ರಹಣದ ದೃಶ್ಯಾವಳಿ ವೀಕ್ಷಿಸಲು, ಅಧ್ಯಯನ ಮಾಡಲು ವಿಶ್ವದಾದ್ಯಂತ ಖಗೋಳ ವಿಜ್ಞಾನಿಗಳು ತುದಿಗಾಲಲ್ಲಿ ನಿಂತು ಆಕಾಶದತ್ತ ಕಣ್ಣು ನೆಟ್ಟಿದ್ದಾರೆ. ಆದರೆ ಭಾರತದಲ್ಲಿ ಈ ಗ್ರಹಣ ಕಾಣಿಸುವುದಿಲ್ಲ.

* ನಾಳೆ ಇಡೀ ಅಮೆರಿಕಾ 3 ನಿಮಿಷ ಕಗ್ಗತ್ತಲಲ್ಲಿ ಮುಳುಗಲಿದೆ.

* 99 ವರ್ಷಗಳ ನಂತರದ ಈ ಗ್ರಹಣದ ವಿಸ್ಮಯ ನೋಡಲು ಇಡೀ ಅಮೆರಿಕಾ ಸಜ್ಜಾಗಿದೆ.

* ಭಾರತೀಯರಿಗೆ ನಾಳಿನ ಈ ಅಪರೂಪದ ದೃಶ್ಯಗಳನ್ನು ಕಾಣುವ ಭಾಗ್ಯವಿಲ್ಲ.

* ಈ ಗ್ರಹಣದ ಅವಧಿ 3 ಗಂಟೆಗಳಾಗಿದ್ದು 3 ನಿಮಿಷ ಮಾತ್ರ ಪೂರ್ಣವಾಗಿ ಸೂರ್ಯನನ್ನು ಚಂದ್ರ ಆವರಿಸಿರುತ್ತಾನೆ.

* ಆ ಮೂರು ನಿಮಿಷ ಸೂರ್ಯ ಸಂಪೂರ್ಣವಾಗಿ ಮುಚ್ಚಿ ಹೋಗಿ ಕಗ್ಗತ್ತಲು.

* ನಂತರದ ಅವಧಿಯಲ್ಲಿ ಸೂರ್ಯ ಭಾಗಶಃ ಕಾಣುತ್ತ ಹೋಗುತ್ತಾನೆ.

ನಾಳೆಯ ಸೂರ್ಯಗ್ರಹಣದ ವಿಶೇಷವೆಂದರೆ 99 ವರ್ಷಗಳ ನಂತರ ಇಡೀ ಅಮೆರಿಕಾ ಖಗ್ರಾಸ ಸೂರ್ಯ ಗ್ರಹಣವನ್ನು ಕಾಣಲಿದೆ. 1919ರಲ್ಲಿ ಇಡೀ ಅಮೆರಿಕಾದಾದ್ಯಂತ ಪೂರ್ಣ ಸೂರ್ಯಗ್ರಹಣ ಗೋಚರಿಸಿತ್ತು.

ಗ್ರಹಣದ ಅವಧಿ 3 ಗಂಟೆಗಳಾಗಿದ್ದು ಇದರಲ್ಲಿ ಕೇವಲ 3 ನಿಮಿಷಗಳು ಮಾತ್ರ ಸೂರ್ಯ ಸಂಪೂರ್ಣ ಮರೆಯಾಗಿರುತ್ತಾನೆ.

ನಾಳೆಯ ಸೂರ್ಯ ಗ್ರಹಣದ ಪೂರ್ಣ ದೃಶ್ಯಗಳನ್ನು ಅಮೆರಿಕಾದಾದ್ಯಂತ ಕಾಣಬಹುದಾಗಿದೆ. ಅಮೆರಿಕಾದ ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗಿನ ಎಲ್ಲಾ ಭಾಗಗಳಲ್ಲಿಯೂ ಪೂರ್ಣ, ಭಾಗಶಃ ಗ್ರಹಣದ ದೃಶ್ಯಗಳು ಕಾಣುವುದರಿಂದಲೇ ಇದನ್ನು ಗ್ರೇಟ್ ಅಮೇರಿಕನ್ ಎಕ್ಲಿಪ್ಸ್ ಎಂದೂ ಕರೆಯಲಾಗಿದೆ.

ಕಳೆದ ಬಾರಿ ಇಂತಹ ಪೂರ್ಣ ಸೂರ್ಯಗ್ರಹಣ ಕಾಣಿಸಿಕೊಂಡಿದಿದ್ದು ಜೂನ್ 8, 1918 ರಲ್ಲಿ ಸೂರ್ಯನ ಮತ್ತು ಭೂಮಿಯ ನಡುವೆ ಚಂದ್ರ ಹಾದುಹೋಗುವಾಗಿನ ಚಂದ್ರನ ನೆರಳು ಭೂಮಿಯನ್ನು ಆವರಿಸುತ್ತದೆ. ಸುಮಾರು 3 ನಿಮಿಷ ಮಾತ್ರ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿರುತ್ತಾನೆ. ಆ ವೇಳೆ ಕಗ್ಗತ್ತಲು,

ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯಗ್ರಹಣ ಉಂಟಾಗುತ್ತದೆ.

ಚಂದ್ರನು ಭಾಗಶಃ ಸೂರ್ಯನನ್ನು ಆವರಿಸಿದಾಗ ಅದು ಖಗ್ರಾಸ ಸೂರ್ಯಗ್ರಾಣವಾಗಿ, ಸಂಪೂರ್ಣವಾಗಿ ಮರೆ ಮಾಡಿದಾಗ ಪೂರ್ಣ ಸೂರ್ಯಗ್ರಹಣ, ನಾಳೆಯದು ಪೂರ್ಣ ಸೂರ್ಯಗ್ರಹಣ.

ಸಂಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರ ಸೂರ್ಯನಿಗಿಂತಲೂ ಗಾತ್ರದಲ್ಲಿ ದೊಡ್ಡವನಾಗಿ ಸಂಪೂರ್ಣ ಸೂರ್ಯ ಕಿರಣಗಳನ್ನು ಎಲ್ಲಾ ದಿಕ್ಕುಗಳಿಂದಲೂ ಮುಚ್ಚುವುದರಿಂದ ಸೂರ್ಯ ಸಂಪೂರ್ಣವಾಗಿ ಕಾಣುವುದಿಲ್ಲ.

ಸೂರ್ಯ ಕಾಣದ ಕಗ್ಗಲು ಆಕಾಶದಲ್ಲಿ ನಕ್ಷತ್ರಗಳು ಮತ್ತು ನಾಲ್ಕು ಗ್ರಹಗಳಾದ ಮಂಗಳ, ಬುಧ, ಗುರು, ಶುಕ್ರ, ಗ್ರಹಗಳನ್ನು ಕಾಣಬಹುದಾಗಿದೆ.

– ಉತ್ತನೂರು ವೆಂಕಟೇಶ್

Leave a Comment