ನಾಳೆ ಸಂಜೆ ರಸಮಂಜರಿ ಕಾರ್ಯಕ್ರಮ

ದಾವಣಗೆರೆ.ಅ.9; ಮಹಾನಗರ ಪಾಲಿಕೆ ಆವರಣದಲ್ಲಿರುವ ಪುಟ್ಟಣ್ಣ ಕಣಗಲ್ ವಾದ್ಯ ಮಂಟಪದಲ್ಲಿ ನಾಳೆ ಸಂಜೆ 6 ಗಂಟೆಗೆ ಗಾನಸುಧೆ ಕಲಾ ಬಳಗ ವತಿಯಿಂದ ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಅಂಗವಾಗಿ ಜೂನಿಯರ್ ವಿಷ್ಣುವರ್ಧನ್ ರವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾನಗರಪಾಲಿಕೆಯ ಆಯುಕ್ತರಾದ ಮಂಜುನಾಥ್ ಬಳ್ಳಾರಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿ ಜಿ ಅಜಯ್ ಕುಮಾರ್ ವಹಿಸಲಿದ್ದು. ಮುಖ್ಯ ಅತಿಥಿಯಾಗಿ ಕರವೇ ಜಿಲ್ಲಾಧ್ಯಕ್ಷ ಎಂ ಎಸ್ ರಾಮೇಗೌಡ್ರು, ಗೌರವಾಧ್ಯಕ್ಷ ವಾಸುದೇವರಾಯ್ಕರ್, ಶ್ರೀನಿವಾಸ ,ಚಿನ್ನಿಕಟ್ಟಿ ಮಹೇಶ್ವರಪ್ಪ, ತಿಮ್ಮೇಶ್, ಹನುಮಂತು, ಲೋಕೇಶ್, ಗೋಪಾಲ ದೇವರಮನೆ, ಪಾಮನಹಳ್ಳಿ ನಾಗರಾಜ್, ಚಿಂದೋಡಿ ಶಂಭುಲಿಂಗಪ,್ಪ ಕೆಎಸ್ ಗೋವಿಂದರಾಜ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಗಾನಸುಧೆ ಕಲಾ ಬಳಗದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ತಿಳಿಸಿದ್ದಾರೆ.

Leave a Comment