ನಾಳೆ ಭಾರತ ಬಂದ್‍ಗೆ ಬೆಂಬಲ

ಮೈಸೂರು. ಸೆ.9- ದೇಶಾದ್ಯಂತ ಪ್ರತಿದಿನ ನಿರಂತರವಾಗಿ ಏರುತ್ತಿರುವ ಇಂಧನ ದರಗಳನ್ನು ವಿರೋಧಿಸಿ ನಾಳೆ ಹಮ್ಮಿಕೊಳ್ಳಲಾಗಿರು ಭಾರತ ಬಂದಗೆ ಮೈಸೂರು ಜಿಲ್ಲಾ ಕಂಗ್ರೆಸ್ ಸಮಿತಿ, ಜೆಡಿಎಸ್ ಪಕ್ಷ, ಸಿ.ಪಿ.ಐ.ಎಂ , ಸಿ.ಪಿ.ಐ, ಓಲಾ ಕ್ಯಾಬ್ ,ಆಟೋಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಸಾರಿಗೆ ನೌಕರರ ಸಂಘಗಳು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿವೆ ಎಂದು ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಸೋಮಣ್ಣ ತಿಳಿಸಿದ್ದಾರೆ.
ನಾಳೆ ಬೆಳಗ್ಗೆ ವಿವಿಧ ಕನ್ನಡ ಸಂಘಟನೆಗಳು ತೈಲಬೆಲೆ ಏರಿಕೆಯನ್ನು ವಿರೋಧಿಸಿ ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿವೆ. ಈ ರ್ಯಾಲಿಯು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಜಿಲ್ಲಾಧಿಕಾರಿ ಕಛೇರಿ ತಲುಪಿ, ಅಲ್ಲಿ ಜಿಲ್ಲಾಧಿಕಾರಿಯವರಿಗೆ ಇಂಧನ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ಆಗುವ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ, ಕೇಂದ್ರ ಸರ್ಕಾರವು ಏರುತ್ತಿರುವ ತೈಲ ಬೆಲೆಯನ್ನು ನಿಯಂತ್ರಣಗೊಳಿಸಲು ಮುಂದಾಗಬೇಕೆಂಬ ಅಂಶಗಳನ್ನೊಳಗೊಂಡ ಮನವಿ ಪತ್ರ ವನ್ನು ಸಲ್ಲಿಸಲಾಗುವುದು. ನಾಳೆ ಬಹುತೇಕ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚುವ ಸಂಭವವಿದ್ದು, ನಗರದಲ್ಲಿ ಸಿಟಿ ಬಸ್ ಹಾಗೂ ಹೊರಜಿಲ್ಲೆ ಮತ್ತು ತಾಲ್ಲೂಕುಗಳಿಗೆ ತೆರಳುವ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸನ್ನಿವೇಶಗಳೂ ಇವೆ. ಇದರೊಂದಿಗೆ ಆಟೋ ಸಂಚಾರ ಕೂಡ ಸ್ಥಬ್ಧಗೊಳ್ಳಲಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಲಿದೆ.
ಭಾರತ ಬಂದ್‍ಗೆ ಬೆಂಬಲ ಇಲ್ಲ
ನಾಳೆ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿರುವ ಭಾರತ ಬಂದ್‍ಗೆ ಮೈಸೂರು ಹೋಟೆಲ್ ಮಾಲೀಕರ ಸಂಘ, ಬಿ,ಜೆ.ಪಿ, ಎ.ಬಿ.ವಿ.ಪಿ ಸೇರಿದಂತೆ ಇನ್ನಿತರ ಸಂಘಟನೆಗಳು ಬೆಂಬಲ ನೀಡುತ್ತಿಲ್ಲ. ನಾಳೆ ನಗರಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ನಾಳೆ ಎಂದಿನಂತೆ ನಗರದ ಎಲ್ಲಾ ಹೋಟೆಲ್ಲ್‍ಗಳು ತೆರೆದಿರುತ್ತವೆ ಎಂದು ಹೋಟೆಲ್ ಮಾಲೀಕರ ಸಂಘವು ತಿಳಿಸಿದೆ.

Leave a Comment