ನಾಳೆ ಬೆಂಗಳೂರಿನಲ್ಲಿ ಅಡುಗೆ ಸ್ಪರ್ಧೆ

ಬೆಂಗಳೂರು, ಜೂ 12 – ದಕ್ಷಿಣ ಭಾರತದ ಬಾಣಸಿಗರ ಸಂಘ, ಎಕ್ಸ್ ಪ್ರೆಸ್ ಫುಡ್ ಮತ್ತು ಹಾಸ್ಪಿಟಾಲಿಟಿಯ ಸಹಯೋಗದೊಂದಿಗೆ ಜೂ 13 ರಂದು ಬೆಳಗ್ಗೆ 11.30 ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಉದ್ಯಮ ಜಾಲಗಳಿಗೆ ಅವಕಾಶಗಳ ಹಾದಿಯನ್ನು ಸುಗಮಗೊಳಿಸುವುದು, ಪಾಕ ಸ್ಪರ್ಧೆ ಮತ್ತು ಕಾರ್ಯಾಗಾರ ಎಂಬ ಮೂರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಸುಮಾರು 150ಕ್ಕೂ ಹೆಚ್ಚಿನ ಹೊಟೇಲ್ ಹಾಗೂ ರೆಸ್ಟೋರೆಂಟ್ ನ ಮಾಲೀಕರು, ನುರಿತ ಬಾಣಸಿಗರು, ಕಾರ್ಯನಿರ್ವಾಹಕ ಬಾಣಸಿಗರು, ಬೇಕರಿ ಹಾಗೂ ಪೇಸ್ಟ್ರೀ ತಯಾರಿಕೆಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಮೊ.9844006736 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment