ನಾಳೆ ಬಚ್‍ಪನ್ ಕಾರ್ನಿವಲ್

ದಾವಣಗೆರೆ, ಜ.17- ನಗರದ ಪಿಜೆ ಬಡಾವಣೆಯಲ್ಲಿರುವ ಬಚ್‍ಪನ್ ಶಾಲೆಯ ವಾರ್ಷಿಕೋತ್ಸವ ಬಚ್‍ಪನ್ ಕಾರ್ನಿವಲ್ ನಗರದ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ನಾಳೆ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ನಡೆಯಲಿದೆ. ಆಲೂರು ಎಜುಕೇಷನ್ ಟ್ರಸ್ಟ್‍ನ ರಾಜೇಶ್ವರಿ ಸಿ.ಆಲೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಆಗಮಿಸಲಿದ್ದಾರೆ. ಅಂದು ಸಂಜೆ 5 ಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಸಮಾರಂಭಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಬಚ್ ಪನ್ ರಿಜಿನಲ್ ಆಫೀಸರ್ ಮಾದವನ್, ಮಧುಕೇಶ್ ಸಿ ಆಲೂರು, ಹೇಮಂತಿನಿ ಶಾಂತಕುಮಾರ್, ಸನತ್ ಕುಮಾರ್, ಹೆಚ್.ಎಂ.ಚಂದ್ರಶೇಖರ್, ನಂದಿನಿ ಪಾಟೀಲ್ ಮತ್ತಿತರರು ಉಪಸ್ಥಿತರಿರುವರು.

Leave a Comment