ನಾಳೆ ‘ಪೇರಲ ಬೆಳೆ ಮತ್ತು ಔಷಧೀಯ ಬಳಕೆ’ ಉಪನ್ಯಾಸ

ಧಾರವಾಡ ಜೂ.19-:  ಬಡವರ ಸೇಬು ಎಂದೇ ಖ್ಯಾತವಾಗಿರುವ ಪೇರಲ ಹಣ್ಣಿನ ಬೆಳೆ ಮತ್ತು ಅದರ ಔಷಧೀಯ ಬಳಕೆ ಬಗ್ಗೆ  ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ ನಾಳೆ  ಸಂಜೆ 6 ಗಂಟೆಗೆ ಸಂಘದ  ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪೇರಲ ಬೆಳೆ ಬಗ್ಗೆ ನಡೆದ ಮತ್ತು ನಡೆಯುತ್ತಿರುವ ಸಂಶೋಧನೆಗಳು ಮತ್ತು ಇಳುವರಿ ಬಗ್ಗೆ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಸ್ಲೈಡ್ಸ್‍ಗಳನ್ನು ಪ್ರದರ್ಶಿಸಲಿದ್ದಾರೆ.
ಸಕ್ಕರೆ ರೋಗಕ್ಕೆ ಪೇರಲದ ಎಲೆ ಕಾಯಿ ಮತ್ತು ಹಣ್ಣುಗಳು ಮದ್ದು ಎಂಬ ವಿಷಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಕಿಟೆಲ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಆರ್. ವಾಯ್. ಕಟ್ಟಿ ಪೇರಲದ ಔಷಧೀಯ ಬಳಕೆ ಬಗ್ಗೆ, ಪೇರಲದ ಬೆಳೆಗಾರರ ಬಗ್ಗೆ ಪ್ರಗತಿಪರ ರೈತರೂ ಆಗಿರುವ ಬಸವರಾಜ ವಿಭೂತಿ ಮಾತನಾಡಲಿದ್ದಾರೆ. ಕ.ವಿ.ವ.ಸಂಘದ ಸಹಕಾರ್ಯದರ್ಶಿ ಹಾಗೂ ಪ್ರಗತಿಪರ ರೈತರಾದ ಸದಾನಂದ ಶಿವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃಷಿಕರು, ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಆಸಕ್ತರು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಹಾಗೂ ವಿಜ್ಞಾನ ಮಂಟಪದ ಸಂಚಾಲಕರಾದ ಮನೋಜ ಪಾಟೀಲ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Comment