ನಾಳೆ ದಸಂಸ ಧರಣಿ ಸತ್ಯಾಗ್ರಹ

ಮಧುಗಿರಿ, ಫೆ. ೭- ಪರಿಶಿಷ್ಟ ಜಾತಿ ಮತ್ತು ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆ (PTCL) ಯ ವಿರುದ್ದ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ 2019-2020ರ ಬಜೆಟ್ ಅಧಿವೇಶನದಲ್ಲಿ ಸುಗ್ರೀವಾಜ್ಞೆ ತರಬೇಕೆಂದು ಆಗ್ರಹಿಸಿ ಹಾಗೂ ದಲಿತರ ಮೂಲಭೂತ ಹಕ್ಕುಗಳ ಜಾರಿಗಾಗಿ ಒತ್ತಾಯಿಸಿ. ಕ.ದ.ಸಂ.ಸ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ಫೆ. 8 ರಂದು ತುಮಕೂರು ಜಿಲ್ಲಾ ಕಚೇರಿಯ ಎದುರು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ದೊಡ್ಡೇರಿ ಕಣಿಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment