ನಾಳೆ ತಪೋವನದಲ್ಲಿ ಯೋಗದಿನಾಚರಣೆ

ದಾವಣಗೆರೆ.ಜೂ.20; ಸಮೀಪದ ದೊಡ್ಡಬಾತಿಯಲ್ಲಿರುವ ತಪೋವನದಲ್ಲಿ ನಾಳೆ ಬೆಳಗ್ಗೆ 8ಕ್ಕೆ ಅಂತರಾಷ್ಟ್ರೀಯ ಯೋಗದಿನಾಚರನೆ ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ. ತಪೋವನ ಸಮೂಹ ಸಂಸ್ಥೆಗಳು ಹಾಗೂ ನಿರ್ದೇಶಕರು, ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಛೇರ್ಮನ್ ಡಾ. ವಿ.ಎಂ. ಶಶಿಕುಮಾರ್
ಅಧ್ಯಕ್ಷತೆ ವಹಿಸಲಿದ್ದಾರೆ.ಹರಿಹರದ ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ
ಡಾ. ಎಸ್. ಎಚ್. ಪ್ಯಾಟಿ, ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಸ್ಟಿನ್ ಡಿಸೋಜ
ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಯೋಗದ ಕುರಿತು ಸರ್ಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಂಗಾಧರ ವರ್ಮ
ವಿಶೇಷ ಉಪನ್ಯಾಸ ನೀಡಲಿದ್ದಾರೆ.

Leave a Comment