ನಾಳೆ ಡಿಕೆಶಿ ಪಾಲಿಗೆ ‘ನಿರ್ಣಾಯಕ ದಿನ’ : ಇತ್ತ ಡಿಕೆಶಿ ‘ಪುತ್ರಿಗೆ ಇಡಿ ಡ್ರಿಲ್’

ನವದೆಹಲಿ.ಸೆ.೧೨- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇಂದು ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯ ಇಡಿ ಕಚೇರಿಗೆ ಹಾಜರಾಗಿದ್ದು, ಈ ವೇಳೆ, ತನಿಖಾಧಿಕಾರಿಗಳು ಭಾರಿ ಪ್ರಮಾಣದಲ್ಲಿ ಹಣ ವರ್ಗಾವಣೆ ಕುರಿತಂತೆ ಪ್ರಶ್ನೆಗಳನ್ನು ಕೇಳಿದ್ದಾರೆ. ಐಶ್ವರ್ಯ ಹೆಸರಿನಲ್ಲಿ 108 ಕೋಟಿ ಹಣ ವ್ಯವಹಾರದ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇಡಿ ಅಧಿಕಾರಿಗಳು ನಿಮ್ಮ ತಂದೆ ನಿಮ್ಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರಾ, ಕಾಫಿ ಡೇ ಖಾತೆಗೆ ವರ್ಗಾವಣೆಯಾದ ಹಣದ ಮೂಲ ಯಾವುದು ಎಂಬೆಲ್ಲ ಪ್ರಶ್ನೆಗಳನ್ನು ಐಶ್ವರ್ಯ ಅವರಿಗೆ ಕೇಳಿದ್ದಾರೆ. ಇನ್ನು ಐಶ್ವರ್ಯ ಅವರ ಬ್ಯಾಂಕ್ ಅಕೌಂಟ್ ನ್ನು ಜಾಲಾಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ.

ಮತ್ತೊಂದೆಡೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ನಾಳೆ ಡಿಕೆಶಿಗೆ ನಿರ್ಣಾಯಕ ದಿನವಾಗಿದ್ದು, ಅವರಿಗೆ ಜಾಮೀನು ಸಿಗುತ್ತಾ ಅಥವಾ ಮತ್ತೆ ಸಂಕಷ್ಟ ಎದುರಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಡಿಕೆಶಿ ಅವರು ವಿಚಾರಣೆಗೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ಇಡಿ ಆರೋಪಿಸಿದ್ದು, ಮತ್ತೆ ಮೂರು ನಾಲ್ಕು ದಿನ ಮತ್ತೆ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಅಥವಾ ತನಿಖೆ ಅವಶ್ಯವಿಲ್ಲವಾದರೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಸಾಧ್ಯತೆಯೂ ಇದೆ. ತನಿಖಾ ವರದಿಯ ಬಗ್ಗೆ ಕೋರ್ಟ್ ಗೆ ಇಡಿ ಮಾಹಿತಿ ನೀಡಬೇಕಿದೆ.

ಈ ಮಧ್ಯೆ, ದೆಹಲಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಭೇಟಿ ಮಾಡಲು ಯತ್ನ ನಡೆಸಿದ್ದಾರೆ. ಡಿಕೆಶಿ ಭೇಟಿ ಮಾಡುವ ಬಗ್ಗೆ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಅವರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ, ಕುಟುಂಬವರ್ಗದವರಿಗೆ ಮಾತ್ರ ಅವಕಾಶ ವಿರುವುದಾಗಿ ಸುರೇಶ್ ತಿಳಿಸಿದ್ದಾರೆ…

Leave a Comment