ನಾಳೆ ಜೆ.ಡಿ.ಎಸ್ ಕಾರ್ಯಕರ್ತರ ಸಭೆ

ಮೈಸೂರು. ಆ.10- ಮೈಸೂರು ನಗರ ಜನತಾದಳ (ಜಾತ್ಯಾತೀತ) ಪಕ್ಷದ ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ವತಿಯಿಂದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ 2018 ವಿಷಯವಾಗಿ ಚರ್ಚಿಸಲು ನಾಳೆ ಸಂಜೆ 4 ಗಂಟೆಗೆ ಪಕ್ಷದ ಸಂಘಟನಾ ಹಾಗೂ ಚುನಾವಣಾ ಸಭೆಯನ್ನು ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದೆ ಎಂದು ಎನ್.ಆರ್. ಕ್ಷೇತ್ರದ ಆಧ್ಯಕ್ಷ ಎಂ.ಎನ್.ರಾಮು ತಿಳಿಸಿದರು.
ಮುಖ್ಯಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಎನ್.ಆರ್.ಕ್ಷೇತ್ರದ ಮುಖಂಜರಾದ ಅಬ್ದುಲ್ ಅಜೀಜ್ (ಅಬ್ದುಲ್ಲಾ) ಹಾಗೂ ವಿ.ಪ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಉಪಮೇಯರ್ ಇಂದಿರಾ ರಮೇಶ್, ಮೈಲಾಕ್ ನ ಮಾಜಿ ಅಧ್ಯಕ್ಷ ಕೃಷ್ಣ ಹಾಗೂ ಎನ್.ಆರ್. ಕ್ಷೇತ್ರದ ರಾಮು ಸೇರಿದಂತೆ ಇನ್ನಿತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಭೆಯ ಅಧ್ಯಕ್ಷೆಯನ್ನು ಪಕ್ಷದ ನಗರಾಧ್ಯಕ್ಷ ಕೆ.ಟಿ. ಚೆಲುವೇಗೌಡ ವಹಿಸಲಿದ್ದಾರೆ. ಈ ಸಭೆಗೆ ಪಕ್ಷದ ಹಾಲಿ, ಮಾಜಿ ಪೌರರುಗಳು, ನಗರ ಪಾಲಿಕೆ ಸದಸ್ಯರುಗಳು, ಎಲ್ಲಾ ಹಂತದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಟಿಕೇಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ.ಎನ್.ರಾಮು ಮನವಿ ಮಾಡಿದ್ದಾರೆ.

Leave a Comment