ನಾಳೆ ಜಾನಪದ ಉತ್ಸವ

ಹುಬ್ಬಳ್ಳಿ  ಅ  ೧೭ – ಶ್ರೀ ಅಲೆಮಾರ ಜಾನಪದ ಗೊಂಬೆಕುಣಿತ ಕಲಾವಿದರ ಸಂಘ  ಹಾಗೂ  ಶ್ರೀ ಮಲ್ಲಿಕಾರ್ಜುನ ಅಲೆಮಾರಿ ದಾಲಪಟ ಕಲಾವಿದರು ಕಲಾವಿದರ  ಸಂಘ.  ಇವರ ಸಹಯೋಗದಲ್ಲಿ  ಜಾನಪದ ಉತ್ಸವವನ್ನು ನಾಳೆ    ಧಾರವಾಡದ.  ಕ.ವಿ.ವ . ಡಾ. ಪಾಟೀಲ್ ಪುಟ್ಟಪ್ಪ  ಸಭಾಭವನದಲ್ಲಿ ಜರುಗಲಿದೆ ಎಂದು  ಶ್ರೀಕಾಂತ್ ಬಬ್ಬಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಅಂದು ಬೆಳಿಗ್ಗೆ ೧೦.೩೦ ಕ್ಕೆ   ಡೊಳ್ಳು ಕುಣಿತ, ಚೌಡಕಿ  ಪದಗಳು,  ಕಹಳೆ ವಾದನ, ಸಾಂಪ್ರದಾಯದ  ಹಾಡುಗಳು,  ಕೋಲಾಟ,  ಸುಡಗಾಡು ಸಿದ್ಧರ ಕಲಾ ಪ್ರದರ್ಶನ,  ಸಂಬಾಳವಾದ್ಯ ಮತ್ತು ದಾಲಪೇಟ ಕಲಾ ಪ್ರದರ್ಶನ  ಜರುಗಲಿದೆ ಎಂದರು.
ಅಂದಿನ ಕಾರ್ಯಕ್ರಮದಲ್ಲಿ   ರುದ್ರಾಕ್ಷಿಮಠದ.  ಶ್ರೀ ಬಸವಲಿಂಗ  ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಉದ್ಘಾಟನೆಯನ್ನು   ಶಾಸಕರಾದ. ಅರವಿಂದ್ ಬೆಲ್ಲದ್,   ಅಧ್ಯಕ್ಷತೆ ಪಿ.ಕೆ. ರಾಯನಗೌಡ್ರ,  ಮಂಜುಳಾ ಯಲಿಗಾರ,  ಗುರುರಾಜ ಹುಣಸಿಮರದ,   ನಾಗೇಶ ಕಲಬುರ್ಗಿ,  ಶಿವಾನಂದ ಮುತ್ತಣ್ಣವರ,  ಪ್ರಕಾಶ್  ಬಾಳಿಕಾಯಿ   ಸೇರಿದಂತೆ  ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ಸಣ್ಣಹನುಮಂತಪ್ಪ  ಹುಳ್ಳಿ,  ಸಂಗಪ್ಪ ಪರವತ್ ಮಲ್ಲಯ್ಯ,  ಹೀರೆಹನಮಂತಪ್ಪ ಹುರಳಿ, ರಾಜಪ್ಪ ಉಳ್ಳಿ, ಜಾಫರ್ ಮುಲ್ಲಾ, ಬಸವರಾಜ   ಸೇರಿದಂತೆ ಇತರರು ಇದ್ದರು.

Leave a Comment