ನಾಳೆ ಚಿದಂಬರಂರನ್ನು ಬಂಧಿಸಲಿರುವ ಜಾರಿ ನಿರ್ದೇಶನಾಲಯ

ಹೊಸದಿಲ್ಲಿ, ಅ.15: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸೆಪ್ಟೆಂಬರ್ 5ರಿಂದ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ನಾಳೆ ಬಂಧಿಸಲಿದೆ. ಚಿದಂಬರಂ ಅವರ ಕಸ್ಟಡಿ ವಿಚಾರಣೆಗೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅಪೀಲಿಗೆ ವಿಶೇಷ ನ್ಯಾಯಾಲಯ ಒಪ್ಪಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಈ.ಡಿ. ನಿರ್ಧರಿಸಿದೆ.

ಜಾರಿ ನಿರ್ದೇಶನಾಲಯ ನಾಳೆ ಬೆಳಗ್ಗೆ ಚಿದಂಬರಂ ಅವರನ್ನು ಬಂಧಿಸಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಅವರ ಕಸ್ಟಡಿಗೆ ಅಪೀಲು ಸಲ್ಲಿಸಲಿದೆ.

ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಬಂಧನದಲ್ಲಿರುವ ಚಿದಂಬರಂ ತಮ್ಮ ಜಾಮೀನು ಅರ್ಜಿಯಲ್ಲಿ ತಮ್ಮನ್ನು ಜೈಲಿನಲ್ಲಿಯೇ 60 ದಿನ ಇರಿಸುವ ಸಂಚಿದೆ ಎಂದಿದ್ದರು. “ಅವರು ಸಿಬಿಐ ಕಸ್ಟಡಿಯಲ್ಲಿರುವಾಗಲೇ ಜಾರಿ ನಿರ್ದೇಶನಾಲಯಕ್ಕೆ ಶರಣಾಗಲು ಬಯಸಿದ್ದರು” ಎಂದು ಅವರ ವಕೀಲ ಕಪಿಲ್ ಸಿಬಲ್ ಹೇಳಿದ್ದರು.

Leave a Comment