ನಾಳೆ ಚಿಂಚೋಳಿ ಬಂದ್

 

ಕಲಬುರಗಿ,ಡಿ.2-ಪ್ರತಿ ಕ್ವಿಂಟಲ್ ತೋಗರಿಗೆ 7500  ರೂ ಬೆಂಬಲ ಬೆಲೆ ನೀಡಬೇಕು, ಪ್ರತಿ ಗ್ರಾಮ ಪಂಚಾಯಿತಿಗೊಂದು ತೋಗರಿ ಖರಿದಿ ಕೇಂದ್ರ ತೆರೆಯಬೇಕು, ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂಪಾಯಿ ಬೆಳೆ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.3 ರಂದು ಚಿಂಚೋಳಿ ಬಂದ್ ಕರೆ ನೀಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.

ರೆಷನ್ ಪಡಿತರ ಚೀಟಿ ಕಡಿತಗೊಳಿಸುವುದನ್ನು ಕೈ ಬಿಟ್ಟು ಎಲ್ಲರಿಗೂ ರೆಷನ್ ಪಡಿತರ ಚೀಟಿ ವಿತರಣೆ ಮಾಡಬೇಕು, ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು, ಸಂವಿಧಾನ ಉಳುವಿಗಾಗಿ ಮತ್ತು ಬೆಳೆ ವಿಮೆ ಹಣ ಮಂಜೂರು ಮಾಡಬೇಕು, ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಾರರಂಭವಾಗಬೆಕು, ಮುಲ್ಲಾಮಾರಿ ಏತ ನಿರಾವರಿ ಜಲಾಶಯ ದಿಂದ ರೈತರ ಜಮೀನುಗಳಿಗೆ ನೀರು ಹರಿಸಬೇಕು, ಚಿಂಚೋಳಿ, ಚಂದಾಪುರಕ್ಕೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ವಿಧ್ಯಾರ್ಥಿನಿಯರ, ಮಹಿಳೆಯರು ಮೆಲೆ ಅತ್ಯಾಚಾರ ಮಾಡಿ ಕೋಲೆ ಮಾಡುತ್ತಿರುವ ಕಿಡಿಗೇಡಿಗಳಿಗೆ ಜೀವವಾಧಿ ಶಿಕ್ಷೆ ವಿಧಿಸಬೇಕು, ಗಡಿನಿಂಗದಳ್ಳಿ, ಚನ್ನೂರ  ಪುನರ್ ವಸತಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಬಂದ್ ಮೂಲಕ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚಿಂಚೋಳಿ ತಾಲೂಕಿನ ಎಲ್ಲಾ ನಾಗರಿಕರು, ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಹಣ್ಣಿನ ಕೈ ಬಂಡಿ ವ್ಯಾಪಾರಸ್ಥರು, ಅಟೋ ಚಾಲಕರು ಮತ್ತು ಮಾಲೀಕರು, ಲಾರಿ ಮಾಲೀಕರು, ಬೈಕ್ ಸವಾರರು, ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಬಂದ್ ಗೆ ತಾವುಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Comment