ನಾಳೆ ಅಧ್ಯಯನ ಕೇಂದ್ರ ಉದ್ಘಾಟನೆ

ಧಾರವಾಡ, ಅ 12- ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದೆ ಅ. 13ರಂದು ಬೆಳಗ್ಗೆ 11.00 ಘಂಟೆಗೆ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಸುವರ್ಣ ಮಹೋತ್ಸವ ಕಟ್ಟಡದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಮಾಜಿ ಲೋಕ ಸಭಾ ಸಭಾಧ್ಯಕ್ಷ  ಮೀರಾ ಕುಮಾರ್ ಉದ್ಘಾಟಿಸಲಿದ್ದಾರೆ.
ಡಾ. ಬಾಬು ಜಗಜೀವನ್ ರಾಮ್ ಅವರ ಪುತ್ರಿಯಾಗಿರುವ ಮಾಜಿ ಲೋಕ‌ಸಭಾ ಅಧ್ಯಕ್ಷ ಡಾ. ಮೀರಾ ಕುಮಾರ ಅವರು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಸ್ತುತವಾಗಿ ವಿವಿಧ 10ಕ್ಕು ಹೆಚ್ಚು ಪೀಠಗಳು ಕ್ರಿಯಾಶೀಲವಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಪ್ರಮುಖವಾದವುಗಳು ಡಾ. ಅಂಬೇಡ್ಕರ್ ಅಧ್ಯಯನ ವಿಭಾಗ, ಕನಕ ಪೀಠ, ಬಸವ ಪೀಠ, ಸ್ವಾಮಿ ವಿವೇಕಾನಂದ ಕೇಂದ್ರ, ಯೋಗಿ ವೇಮನ ಪೀಠ, ಗಾಂಧಿ ಅಧ್ಯಯನ ವಿಭಾಗ ಇತ್ಯಾದಿ. ಅಂತಹ ಮಹತ್ವದ ಪೀಠಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ದೂರದೃಷ್ಟಿವುಳ್ಳ ಸಾಂಸ್ಕೃತಿಕ ಲೋಕದ ಏಳ್ಗೆಗಾಗಿ ಸಂಶೋಧನಾ ನಡೆಸುವ ಆಶಯವನ್ನು ಹೊಂದಿದೆ.
ಭಾರತವು ಒಂದು ವೈವಿಧ್ಯತೆಯಿಂದ ಕೂಡಿದ ಸಮಗ್ರ ರಾಷ್ಟ್ರವಾಗಿದೆ. ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕಾಣಬಹುದು. ಅಂತಹ ಅನನ್ಯ ವ್ಯಕ್ತಿತ್ವ ಹೊಂದಿದ ವ್ಯಕ್ತಿಯೆಂದರೆ ಡಾ. ಬಾಬು ಜಗಜೀವನರಾಮ್‍ರವರು. ಇವರು ಬಾಬುಜೀ ಎಂದೇ ಖ್ಯಾತರಾಗಿದ್ದಾರೆ. ಇವರು ಅತ್ಯಂತ ಕಡುಬಡತನದಿಂದ ಬಂದ ಹಿಂದುಳಿದ ಬಿಹಾರ ರಾಜ್ಯದಿಂದ ಬಂದವರು. ಸ್ವಾತಂತ್ರ್ಯಗೊಂಡ ಭಾರತದ ಮೊದಲ ಉಪಪ್ರಧಾನಿಯಾಗಿ ಆಯ್ಕೆಯಾಗಿ ಆ ಸ್ಥಾನವನ್ನು ಅಲಂಕರಿಸಿದ ದಲಿತ ವರ್ಗದ ವ್ಯಕ್ತಿಯಾಗಿ ಶೋಷಿತರ ಧ್ವನಿಯಾಗಿ ಧೈರ್ಯ, ನೇರ ನುಡಿ, ಕ್ರಿಯಾಶೀಲ ವ್ಯಕ್ತಿಯಾಗಿ ಬೆಳೆದು ಬಂದಿರುವರು. ಇವರು ಮುಂದೆ ಜೀವನದಲ್ಲಿ ಶೋಷಿತರ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ. ಬಾಬುಜಿಯವರ ಜೀವನದಲ್ಲಿ ಮದನ್‍ಮೋಹನ ಮಾಳವಿಯಾ, ಡಾ. ರಾಜೇಂದ್ರ ಪ್ರಸಾದ, ಸರ್ದಾರ್ ವಲ್ಲಭಬಾಯಿ ಪಟೇಲ, ನೆಹರು, ಮಹಾತ್ಮಾ ಗಾಂಧಿಜೀಯವರುಗಳಿಂದ ಪ್ರೇರಣೆಗೊಂಡವರು. ಸ್ವಾತಂತ್ರ್ಯ ಭಾರತದ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಮುಂದೆ ನಾಲ್ಕು ದಶಕಗಳವರೆಗೆ ಕೇಂದ್ರ ಸಂಪುಟದಲ್ಲಿ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸೋಲರಿಯದ ಸರದಾರರೆಂದೇ ಹೆಸರಾಗಿದ್ದಾರೆ. ಇವರು ನಿರ್ವಹಿಸಿದ ಪ್ರಮುಖ ಖಾತೆಗಳೆಂದರೆ ರಕ್ಷಣೆ, ಶಿಕ್ಷಣ, ಕೃಷಿ, ಕಾರ್ಮಿಕ ಮುಂತಾದವುಗಳಾಗಿವೆ.
ಭಾರತವು ಬಡತನದಿಂದ ಬಳಲುವ ಸಂದರ್ಭದಲ್ಲಿ ಜನರ ಆಹಾರದ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶದಿಂದ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ.
ರಕ್ಷಣಾ ಇಲಾಖೆಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಯುವಕರಲ್ಲಿ ರಾಷ್ಟ್ರೀಯ ಭಾವನೆ ಬೆಳೆಸುವಲ್ಲಿ ಅಮೋಘ ಕೊಡುಗೆ ನೀಡಿರುವರು. ಕಾರ್ಮಿಕ ವರ್ಗದವರ ಹೀನ ಸ್ಥಿತಿಯನ್ನು ನೋಡಿ ಕಾರ್ಮಿಕ ಕಾಯ್ದೆ ಸ್ಥಾಪಿಸಿ ಇಡೀ ರಾಷ್ಟ್ರಕ್ಕೆ ಕಾರ್ಮಿಕ ಕಾಯ್ದೆಗಳ ಶಿಲ್ಪಿಯೆಂದು ಖ್ಯಾತರಾಗಿದ್ದಾರೆ. ಮಾದರಿಯಾಗುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ತುಳಿತಕ್ಕೆ ಒಳಗಾದವರು ಶೋಷಿತ ವರ್ಗದ ಹಿತ ಕಾಪಾಡುವಲ್ಲಿ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿ ಸಾಮಾಜಿಕ ನ್ಯಾಯದ ಹರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವ ಒಂದೇ ಈ ದೇಶದಲ್ಲಿ ಕೆಳಮಟ್ಟದ ವರ್ಗದವರನ್ನು ತಲುಪಲು ಸಾಧ್ಯವೆಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಬಾಬುಜೀಯವರು ಶೋಷಿತ ವರ್ಗದಿಂದ ಬಂದವರಾದ್ದರಿಂದ ಅವರ ನೋವು-ಕಷ್ಟಗಳನ್ನು ಸ್ವತಃ ಅನುಭವಿಸಿದ್ದರಿಂದಾಗಿ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಹಾಗೂ ಸಹಬಾಳ್ವೆ ನಡೆಸಲು ಸಾಮಾಜಿಕ ನ್ಯಾಯವು ಅತ್ಯಂತ ಅವಶ್ಯಕವೆಂದು ಹೇಳಿದರು. ಇದಕ್ಕೆ ಬಲವಾದ ಕಾರಣವೆಂದರೆ 16ನೇ ಶತಮಾನದಲ್ಲಿ ಬಾಳಿ ಬದುಕಿದ ಸಂತ ರವಿದಾಸರವರು ಭಾರತದ ಸಾಮಾಜಿಕ ಪುನರ್‍ರಚನೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮೂಡಿಸಿ ಶೋಷಿತರ ಜೀವನ ಮಟ್ಟ ಸುಧಾರಣೆಗೆ ಪ್ರಯತ್ನಿಸಿದ್ದರು. ಬಾಬುಜೀಯವರು ಸಂತ ರವಿದಾಸರವರಿಂದ ಅತ್ಯಂತ ಪ್ರಭಾವಕ್ಕೆ ಒಳಗಾದರು.
ಭಾರತವು ಕಂಡ ಕೆಲವೇ ಕೆಲವು ಉನ್ನತ ವ್ಯಕ್ತಿತ್ವ ಹೊಂದಿದವರಲ್ಲಿ ಬಾಬುಜೀಯವರು ಒಬ್ಬರಾಗಿದ್ದಾರೆ. ಇವರ ಅಮೋಘ ಕೊಡುಗೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರವು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇವರ ಹೆಸರಿನಲ್ಲಿ “ಡಾ. ಬಾಬು ಜಗಜೀವನರಾಮ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ” ಸ್ಥಾಪಿಸಲು 2 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿರುವರು. ಇದರ ಪ್ರಮುಖ ಕಾರ್ಯ. ಡಾ. ಬಾಬು ಜಗಜೀವನರಾಮ್‍ರವರ ಕೊಡುಗೆಗಳು, ಮೌಲ್ಯಗಳನ್ನು ಆಳವಾಗಿ ಅಧ್ಯಯನ ಮಾಡಲು ಹಾಗೂ ಸಂಶೋಧನೆ ಮಾಡಬಹುದಾಗಿದೆ.

Leave a Comment