ನಾಳೆ ಅಜ್ಜನ ಜಾತ್ರೆಗೆ ಉಚಿತ ಅಟೋ

ಹುಬ್ಬಳ್ಳಿ,ಫೆ 13- ನಗರದ ಅಟೋ ರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘ, ಸಿದ್ಧಾರೂಢ ಜಾತ್ರೆ ಅಂಗವಾಗಿ ನಾಳೆ ಬೆಳಿಗ್ಗೆ 9.30 ರಿಂದ ಸಾಯಂಕಾಲ 5.30ರ ವರೆಗೆ ಉಚಿತ ಆಟೋ ರಿಕ್ಷಾ ಸೇವೆ ಮಾಡಲು ನಿರ್ಧರಿಸಿದೆ.
ಹಳೆ ಬಸ್ ಸ್ಟ್ಯಾಂಡ್ ಎದುರಿಗೆ ಮಿರ್ಜಾನಕರ ಪೆಟ್ರೋಲ್ ಬಂಕ್, ಕಾರವಾರ ರೋಡ, ಇಂಡಿಪಂಪ್ ಸರ್ಕಲ್, ಸಿದ್ಧಾರೂಢ ಮಹಾದ್ವಾರದ ಹತ್ತಿರ ಸಿದ್ಧಾರೂಢ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಉಚಿತ ಆಟೋ ಸೇವೆ ಅನುಮತಿ ಕೊಡಲು ನಗರದ ಉತ್ತರ ಸಂಚಾರ ಪೊಲೀಸ್ ಸ್ಟೇಶನ್ ಇವರು ಸಹಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಸುಮಾರು ಎಂಟು ವರ್ಷಗಳಿಂದ ಸಿದ್ಧಾರೂಢ ಜಾತ್ರೆಗೆ ಭಕ್ತರಿಗೆ ಮಾಡುತ್ತಾ ಬಂದಿದ್ದಾರೆ.

Leave a Comment