ನಾಳೆಯ ಉತ್ತಮ ಭವಿಷ್ಯತ್ತಿಗೆ ಮತದಾನ ಮುಖ್ಯ

ದಾವಣಗೆರೆ,ಏ,15; ಶರಣರ ತತ್ವ, ಸಿದ್ದಾಂತ, ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಶರಣರ ಹಾದಿಯಲ್ಲಿ ನಡೆಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ, ಹೆಚ್ ಎಸ್ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಾ ಸ ಬ ಕಲಾ ಮತ್ತು ವಾಣಿಜ್ಯ ಕಾಲೇಜುನಲ್ಲಿಂದು 2018-19ನೇ ಸಾಲಿನ ಪಠ್ಯ ಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರೀಕ ಸಮಾಜ ಕಟ್ಟುವಲ್ಲಿ ಶರಣರ ಸಂಕುಲ ತನ್ನದೇ ಆದ ಕೊಡುಗೆ ನೀಡಿದೆ. ದೇಶ ಬದಲಾಗುತ್ತಿದೆ. ಯಾವ ದಿಕ್ಕಿನತ್ತ ಸಾಗಬೇಕು ಹಾಗೂ ಅದರ ಚಾಲನಶಕ್ತಿ ಯುವ ಸಮೂಹದಲ್ಲಿದೆ. ಸೂಕ್ತ ದಿಕ್ಕಿನತ್ತ ಸಾಗುವಂತಹ ಶಕ್ತಿ ಯುವ ಸಮೂಹಕ್ಕಿರಬೇಕು. ವಿಶ್ವಸಂಸ್ಥೆ ಭಾರತವನ್ನು ಯುವ ಜನಾಂಗದ ನಾಯಕ ಎಂದು ಕರೆದಿದೆ. ಏಕೆಂದರೆ ಹೆಚ್ಚು ಯುವ ಶಕ್ತಿ ಹೊಂದಿರುವ ಏಕೈಕ ರಾಷ್ಟ್ರ ಭಾರತ. ದೇಶ ಬದಲಾಗುವ ದಿಕ್ಕನ್ನು, ಅದರ ಬದಲಾವಣೆ ನಿರ್ಧರಿಸುವ ಏಕೈಕ ಶಕ್ತಿ ಇರುವುದು ಯುವ ಜನಾಂಗಕ್ಕೆ ಮಾತ್ರ. ಇಂತಹ ಸಂದರ್ಭದಲ್ಲಿ ಏ.23 ರಂದು ಬರುವ ಲೋಕಸಭಾ ಚುನವಣೆಯಲ್ಲಿ ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಮತದಾನ ಮಾಡುವ ಮೂಲಕ ಸದೃಢ ಭಾರತ ನಿರ್ಮಿಸಬೇಕು ಮತ್ತು ಜವಬ್ದಾರಿಯನ್ನು ನಿರ್ವಹಿಸಬೇಕು ಮತದಾನ ಮಾಡುವಾಗ ಬೆರಳಿಗೆ ಮಸಿ ಹಾಕಲಾಗುತ್ತದೆ. ಅದು ನಿಮ್ಮ ಮುಂದಿನ ಜೀವನಕ್ಕೆ ಮಸಿಯಾಗದಿರಲಿ. ಉತ್ತಮ ಸರ್ಕಾರ ರಚಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಅದಕ್ಕಾಗಿ ತಪ್ಪದೆ ಮತದಾನ ಮಾಡಬೇಕರಂದು ಕರೆ ನೀಡಿದರು. ಭಾರತ ಅನನ್ಯ ಇತಿಹಾಸ , ಸಂಸ್ಕೃತಿ, ಪರಂಪರೆ ಹೊಂದಿದ ರಾಷ್ಟ್ರವಾಗಿದೆ. ಅದಕ್ಕಾಗಿಯೇ 17 ನೇ ಶತಮಾನದಲ್ಲಿ ಜರ್ಮನಿಯ ತತ್ವಜ್ಞಾನಿಯೊಬ್ಬರು ವಿಶ್ವದ ಯಾವ ರಾಷ್ಟ್ರಗಳನ್ನು ಆಗರ್ಭರಾಷ್ಟ್ರ, ಪಾಶ್ಚಿಮಾತ್ಯ ರಾಷ್ಟ್ರ ಎನ್ನುತ್ತೇವೆಯೋ ಅಲ್ಲಿ ಜ್ಞಾನದ ಸೂರ್ಯ ಮಂಜುಕವಿದಿದೆ.ಆದರೆ ಭಾರತದಲ್ಲಿ ಜ್ಞಾನದ ಸೂರ್ಯ ನೆತ್ತಿಯಲ್ಲಿದ್ದಾನೆ ಎಂದಿದ್ದರು. ಭಾರತದ ಜ್ಞಾನಕ್ಕೆ ತನ್ನದೇ ಆದ ಮಹತ್ವವಿದೆ. ಐತಿಹಾಸಿಕ ಹಿರಿಮೆ ಇದೆ ಎಂದರು.
ಈ ವೇಳೆ ಇಂದೂಧರ್ ನಿಶಾನಿಮಠ, ಈ.ಬಸವರಾಜ್,ಮಾಗನೂರು ಸಂಗಮೇಶ್ವರ ಔಡರು, ಡಾ.ಕೆ.ಹನುಮಂತಪ್ಪ ಇದ್ದರು.

Leave a Comment