ನಾಳೆಯಿಂದ ಯುವದಸರಾ ಸಂಗೀತ, ಸಿನಿ ತಾರೆಯರ ಉತ್ಸವಕ್ಕೆ ಸಿಎಂ ಚಾಲನೆ

ಮೈಸೂರು, ಅ.೧೧- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ನಾಳೆಯಿಂದ 6 ದಿನಗಳ ಕಾಲ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಮೈಸೂರು ಜನತೆಗೆ ಹಾಗೂ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಸಂಗೀತ ರಸದೌತಣ ನೀಡಲು ಯುವ ದಸರಾ ಕಾರ್ಯಕ್ರಮ ರೂಪುಗೊಂಡಿದೆ. ನಾಳೆಯಿಂದ ಆರಂಭವಾಗಲಿರುವ ಯುವದಸರಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಗಾಯಕ ವಿಜಯಪ್ರಕಾಶ್ ತಂಡದಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಅಕ್ಟೋಬರ್ 13ಕ್ಕೆ ಬಾಲಿವುಡ್‍ನ ಖ್ಯಾತ ಹಿನ್ನಲೆ ಗಾಯಕ ಬಾದಾಶಾ ಮತ್ತು ಆಸ್ತಗಿಲ್ ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಅಕ್ಟೋಬರ್ 14 ರಂದು ಅರ್ಮಾನ್ ಮಲ್ಲಿಕ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಕ್ಟೋಬರ್ 15 ಕ್ಕೆ ಸ್ಯಾಂಡಲ್ ವುಡ್ ಬೆಡಗಿಯರ ಭರ್ಜರಿ ಸ್ಯಾಂಡಲ್ ವುಡ್ ನೈಟ್ ನಡೆಯಲಿದೆ. ಇದರಲ್ಲಿ ಸ್ಯಾಂಡಲ್ ವುಡ್ ತಾರೆಯರಾದ ರಚಿತಾ ರಾಮ್, ಹರಿಪೀಯ, ಶಾನ್ವಿ ಶ್ರಿವಾಸ್ತವ್, ಶುಭಾ ಪೂಂಜಾ, ರಾಗಿಣಿ ದಿವ್ವೇದಿ, ವೈಷ್ಣವಿ, ದೀಪಿಕಾ ದಾಸ್ ಭಾಗಿಯಾಗಲಿದ್ದಾರೆ. ಅಕ್ಟೋಬರ್ 16 ರಂದು ಶೆರ್ಲಿ ಸ್ಟುಡಿಯೋ ತಂಡದಿಂದ ಕೋಕ್ ಸ್ಟುಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 17ರಂದು ಕಡೆ ದಿನ ನೇಹಾ ಕಕ್ಕರ್ ತಂಡದಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮವಿದೆ. ಅಂತಿಮ ದಿನ ಸ್ಯಾಂಡವುಡ್‍ನ ರಾಂಕಿಂಗ್ ಸ್ಟಾರ್ ಯಶ್ ಅವರಿಂದ ಭರ್ಜರಿ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭ ಎಸ್ಪಿ ಅಮಿತ್ ಸಿಂಗ್ ಯುವ ದಸರಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದರು. ಯುವ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ಎಂ.ಎನ್. ನಟರಾಜ್, ಲಿಂಗಣ್ಣಯ್ಯ ಉಪಸ್ಥಿತರಿದ್ದರು,

Leave a Comment