ನಾಳೆಯಿಂದ ನಗರದಲ್ಲಿ 3 ದಿನ ಅಂಚೆ ಚೀಟಿ ಪ್ರದರ್ಶನ

ಬಳ್ಳಾರಿ, ಜು.25- ನಾಳೆಯಿಂದ ನಗರದ ಸೆಂಚುನರಿ ಹಾಲ್ ನಲ್ಲಿ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನವನ್ನು ಅಂಚೆ ಇಲಾಖೆ ಹಮ್ಮಿಕೊಂಡಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ರಾದ ವೀಣಾ ಆರ್ ಶ್ರೀನಿವಾಸ್ ಪ್ರದರ್ಶನ ಉದ್ಘಾಟಿಸಲಿದ್ದಾರೆ.

ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ.ನಾಗಮೋಹನ್, ಡಿ.ಎಫ್ ಓ ಡಾ.ಪಿ.ರಮೇಶ್ ಕುಮಾರ್, ಹೂವಿನಹಡಗಲಿಯ ರಂಗಭಾರತಿಯ ಕಾರ್ಯ ಅಧ್ಯಕ್ಷೆ ಎಂ.ಪಿ.ಸುಮ ವಿಜಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ 75 ವರ್ಷ ಪೂರೈಸಿರುವ ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ, ಹಾಗೂ 25 ವರ್ಷ ಪೂರೈಸಿದ ಸುಕೋ ಬ್ಯಾಂಕ್, ಹೂವಿನಹಡಗಲಿಯ ರಂಗಭಾರತಿಯ ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಲಿದ್ದು ಮಧ್ಯಾಹ್ನ 12 ರಿಂದ ಸಂಜೆ 8 ಗಂಟೆವರೆಗೆ ಅಂಚೆಚೀಟಿ ಪ್ರದರ್ಶನ, ಸಂಜೆ 5 ರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.

ಎರಡನೇ ದಿನ ಜು.27 ರಂದು ಬೆಳಿಗ್ಗೆ 11 ಕ್ಕೆ ವೀಣಾ ಆರ್.ಶ್ರೀನಿವಾಸ್ ಅವರು ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಲಿದ್ದಾರೆ. ನಾಡೋಜ ಸುಭದ್ರಮ್ಮ ಮನ್ಸೂರ್, ಚೇಳಗುರ್ಕಿಯ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್ ನ ಕಾರ್ಯದರ್ಶಿ ಎಚ್.ಬಾಳನಗೌ‌ಡ ನಾಗೇಶ ಶಾಸ್ತ್ರಿ, ಸಾಹಿತ್ಯ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಟಾನದ ಅಧ್ಯಕ್ಷ ಬಿ.ಸಿದ್ಧನಗೌಡ, ವಿವಿಸಂಘದ ಸದಸ್ಯ ಸತೀಶ ಎಚರೆಡ್ಡಿ ಉಪಸ್ಥಿತರಿರಲಿದ್ದು, ಲೋಹಿಯ ಪ್ರಕಾಶನದ ಸಿ.ಚೆನ್ನಬಸಣ್ಣ ಅಂಚೆ ಚೀಟಿಗಳ ಬಗ್ಗೆ ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ಯರ್ರಿತಾತಾ ಜೀವ ಸಮಾಧಿ ಮಠ, ಸರ್ವದರ್ಶನ ತೀರ್ಥ ಪಂಡಿತ ವೈ.ನಾಗೇಶ್, 100 ವರ್ಷ ಪೂರೈಸಿದ ವಿ.ವಿ.ಸಂಘ, ಜೋಳದರಾಶಿ ದೊಡ್ಡನಗೌಡ್ರು, ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇವರ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಿಸುವುದು.

ಕೊನೆಯ ದಿನ ಜು.28 ರಂದು ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲು ಧಾರವಾಡದ ಹಿರಿಯ ಅಂಚೆ ಅಧೀಕ್ಷಕ ಜೆ.ಎಸ್.ಶೇಖರ್ ರವರು ಆಗಮಿಸಲಿದ್ದಾರೆ. ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿ ಎಸ್.ಸಿ.ರಮೇಶ್ ರವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಕೊಟ್ಟೂರಿನ ಗುರುಬಸವೇಶ್ವರ ಮಠದ ಪ್ರಧಾನ ಧರ್ಮಕರ್ತ ಸಿ.ಹೆಚ್.ಎಂ.ಗಂಗಾಧರ ಮತ್ತು ಮೈಲಾರ ದೇವಸ್ಥಾನದ ಮೈಲಾರದ ಧರ್ಮಕರ್ತ ಗುರು ವೆಂಕಟಪ್ಪ ಒಡೆಯರ್, ವೀರಶೈವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ ಹಾಗೂ ಜೋಳದರಾಶಿ ರಮೇಶ್ ಟ್ರಸ್ಟ್ ನ ಅಧ್ಯಕ್ಷ ಕೆ.ಪಂಪನಗೌಡ ಇವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಂಜೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗದಗನ ಅಂಚೆ ಅಧೀಕ್ಷಕ ಕೆ.ಬಸವರಾಜ ಮತ್ತು ಧಾರವಾಡದ ಅಂಚೆ ಅಧೀಕ್ಷಕ ಜೆ.ಎಫ್. ಶೇಖರ್ ಭಾಗವಹಿಸುತ್ತಾರೆ.

ಬಳ್ಳಾರಿ ಅಂಚೆ ಅಧೀಕ್ಷಕರ ಐತಿಹಾಸಿಕ ಕಛೇರಿ, ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ಮಠ, ಮೈಲಾರ ಸ್ವಾಮಿ ಮಠ, ವೀರಶೈವ ಕಾಲೇಜ್ ಹಾಗೂ ಪಿಂಜಾರ್ ರಮ್‍ಜಾನ್ ಸಾಬ್ ರವರ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಿದ್ದಾರೆ.

 

Leave a Comment