ನಾಳೆಯಿಂದ ‘ಚಿನ್ನ’ಕ್ಕೆ ಹಾಲ್‌ಮಾರ್ಕ್ ಕಡ್ಡಾಯ

ನವದೆಹಲಿ. ಜ.14. 2020 ರಿಂದ ಚಿನ್ನದ ಆಭರಣಗಳ ಮೇಲೆ ಕಡ್ಡಾಯವಾಗಿ ಹಾಲ್ಮಾರ್ಕಿಂಗ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಅಂತ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್‌ಮಾರ್ಕ್ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್. ಆಭರಣದಲ್ಲಿಬಳಸಲಾಗಿರುವ ಚಿನ್ನದ ಶುದ್ದತೆಗೆ ಇದೊಂದು ಪ್ರಮಾಣ ಪತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿಶತಮಾನಗಳಿಂದಲೂ ಹಾಲ್‌ಮಾರ್ಕ್ ಶುದ್ಧತೆಗೆ ಮಾನದಂಡವಾಗಿದೆ.
2018ರ ಜೂನ್‌ 14ರಂದು ಸರಕಾರ ಬಂಗಾರ ಮತ್ತು ಬೆಳ್ಳಿಯ ಜ್ಯುವೆಲ್ಲರಿಗಳ ಮೇಲೆ ಹಾಲ್‌ ಮಾರ್ಕ್ ಅಗತ್ಯ ಎಂದು ತಿಳಿಸಿತ್ತು. ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್‌ ಮಾಕ್‌ ಅಗತ್ಯ. ಇದು ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಆಗಿನ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ.
ಈ ನಿಯಮವನ್ನು ಜಾರಿಗೊಳಿಸಿದ ನಂತರ, ಎಲ್ಲಾ ಆಭರಣಕಾರರು ಮಾರಾಟ ಮಾಡುವ ಮೊದಲು ಹಾಲ್ಮಾರ್ಕಿಂಗ್ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

Leave a Comment