ನಾಲ್ವರ ಕೈಗೆ ಉಸ್ತುವಾರಿ : 125 ಅಭ್ಯರ್ಥಿಗಳ ಆಯ್ಕೆಗೆ ಚುನಾವಣಾ ಸಮಿತಿ ಕಸರತ್ತು

ಬೆಂಗಳೂರು, ಮಾ. ೧೪- ಶತಾಯ-ಗತಾಯ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಪಣತೊಟ್ಟಿರುವ ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯಯಾತ್ರೆ ಮುಂದುವರೆಸಲು ಕಾರ್ಯೋನ್ಮುಖರಾಗಿದ್ದು, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಮೇಲ್ವಿಚಾರಣೆಗೆ ಉಸ್ತುವಾರಿ ನೇಮಕ ಮಾ‌ಡಿದೆ.

ಬೆಂಗಳೂರು ವಿಭಾಗಕ್ಕೆ ಡಿ.ಕೆ ಶಿವಕುಮಾರ್, ಮೈಸೂರು ವಿಭಾಗಕ್ಕೆ ದಿನೇಶ್ ಗುಂಡೂರಾವ್, ಬೆಳಗಾವಿ ವಿಭಾಗಕ್ಕೆ ಎಸ್.ಆರ್. ಪಾಟೀಲ್ ಹಾಗೂ ಗುಲ್ಬರ್ಗ ವಿಭಾಗಕ್ಕೆ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಇವರ ನೇತೃತ್ವದ ಸಮಿತಿ ಅಭ್ಯರ್ಥಿಗಳ ಆಯ್ಕೆ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳು ದುರ್ಬಲ, ಗೆಲ್ಲುವ ಸಾಮರ್ಥ್ಯ ಎನ್ನುವುದೂ ಸೇರಿದಂತೆ ವಿವಿಧ ವಿಷಯಗಳಲ್ಲಿ ಹೈಕಮಾಂಡ್‌ಗೆ ವರದಿ ನೀಡುವ ಜವಾಬ್ದಾರಿಯನ್ನು ವಹಿಸಲಾಗಿದೆ.

ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರೆಸಾರ್ಟ್‌ವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಪಕ್ಷದ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಹಿರಿಯ ನಾಯಕರಾದ ಡಿ.ಕೆ. ಶಿವಕುಮಾರ್, ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿಗಳೂ ಸೇರಿದಂತೆ ಚುನಾವಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ  ಕೈಗೊಳ್ಳಲಾಗಿದೆ.

125 ಅಭ್ಯರ್ಥಿಗಳ ಪಟ್ಟಿ

ಇಂದು ಸಭೆ ಸೇರಿದ ಚುನಾವಣಾ ಸಮಿತಿ 125 ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ರೂಪ ನೀಡುವ ಜೊತೆಗೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿತು.

ಈ ತಿಂಗಳ ಕೊನೆಯ ವಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಭೆ-ಸಮಾರಂಭಗಳಲ್ಲಿ ಸಿದ್ಧತೆ ಹಾಗೂ ಜೆಡಿಎಸ್ ನ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಿಂದ ಎದುರಾಗಬಹುದಾದ ಪರಿಸ್ಥಿತಿ ಕುರಿತಂತೆ ಈ ಸಭೆಯಲ್ಲಿ ಪರಾರ್ಮಶಿಸಲಾಯಿತು.

ಕಾಂಗ್ರೆಸ್ ನಿಂದ ಟಿಕೆಟ್ ಬಯಸಿ 1600ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಸಿಕೆಯಾಗಿದ್ದು ಈ ಅರ್ಜಿಗಳನ್ನೆಲ್ಲಾ ಪರಿಷ್ಕರಿಸಿ ಅಭ್ಯರ್ಥಿಗಳ ಹಿನ್ನೆಲೆ-ಮುನ್ನಲೆ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗಳಿಸಿರುವ ಜನಪ್ರಿಯತೆ ಜನರೊಂದಿಗೆ ಹೊಂದಿರುವ ಸಂಪರ್ಕ ಮತ್ತಿತರ ವಿಚಾರಗಳನ್ನು ಓರೆಗಲ್ಲಿಗೆ ಹಚ್ಚಲಾಯಿತು.

ರಾಹುಲ್ ಸೂಚನೆಯಂತೆ ಗೆಲ್ಲುವ ಅಭ್ಯರ್ಥಿಗಳು ಹಾಗೂ ವಿವಾದ ರಹಿತ ಅಭ್ಯರ್ಥಿಗಳ ಗುರುತಿಸಿ 125 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.  ಅದರಂತೆ ಅಭ್ಯರ್ಥಿಗಳ ಸ್ಥಿತಿ-ಗತಿಗಳನ್ನು ಚರ್ಚಿಸಿ 125 ಮಂದಿ ಪಟ್ಟಿಗೆ ಅಂತಿಮ ರೂಪ ನೀಡಲಾಗಿದೆ.

ರಾಜ್ಯದಲ್ಲಿ ಮೂರನೇ ಹಂತದ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿಯವರು, ಮೊದಲಿಗೆ ಮಂಗಳೂರು ನಂತರ ಮಾ.24, 25ರಂದು ಮೈಸೂರು ವಿಭಾಗದಲ್ಲಿ ಚುನಾವಣಾ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಗಳ ಸಿದ್ಧತೆ ಕಾರ್ಯಕರ್ತರ ಸಂಘಟನೆ ಮತ್ತಿತರೆ ವಿಚಾರಗಳ ಕುರಿತಂತೆಯೂ ಚರ್ಚೆ ನಡೆಸಲಾಯಿತು.

ಜೆಡಿಎಸ್ ನ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಮುಹೂರ್ತ ನಿಗಧಿಯಾಗಿದೆ. ಆದರೆ ಈ ಶಾಸಕರ ಸೇರ್ಪಡೆಯಿಂದ ಅವರ ಅವರ ಕ್ಷೇತ್ರಗಳಲ್ಲಿ ಉಂಟಾಗಬಹುದಾದ ಬಂಡಾಯ, ಭಿನ್ನಾಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಶಾಸಕರ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಲಾಯಿತು.

ಬೆಂಗಳೂರು ವಿಭಾಗ

ಡಿ.ಕೆ. ಶಿವಕುಮಾರ್
ವೀರಪ್ಪಮೊಯ್ಲಿ
ಕೆ.ಜೆ. ಜಾರ್ಜ್ ರಾಮಲಿಂಗಾರೆಡ್ಡಿ
ಎಂ. ಕೃಷ್ಣಪ್ಪ
ಸಿ.ಎಂ. ಇಬ್ರಾಹಿಂ
ಕೃಷ್ಣಭೈರೇಗೌಡ
ಎಸ್.ಎಸ್. ಮಲ್ಲಿಕಾರ್ಜುನ್
ರೋಷನ್ ಬೇಗ್
ಹೆಚ್.ಎಸ್. ಮಂಜುನಾಥ್
ಕೆ.ಪಿ. ಕೃಷ್ಣಮೂರ್ತಿ
ಡಿ.ಕೆ. ಸುರೇಶ್
ಎಸ್.ಪಿ. ಮುದ್ದಹನುಮೇಗೌಡ
ಬಿ.ಎನ್. ಚಂದ್ರಪ್ಪ
ಪ್ರೊ. ರಾಜೀವ್ ಗೌಡ
ಕೆ.ಸಿ. ರಾಮಮೂರ್ತಿ

ಮೈಸೂರು ವಿಭಾಗ

ದಿನೇಶ್ ಗುಂಡೂರಾವ್
ಕೆ.ಎಸ್.ಮುನಿಯಪ್ಪ
ರೆಹಮಾನ್ ಖಾನ್
ರಮಾನಾಥ್ ರೈ
ಹೆಚ್.ಸಿ. ಮಹದೇವಪ್ಪ
ಬಿ.ಎಲ್. ಶಂಕರ್ ಮೋಟಮ್ಮ
ರಾಣಿ ಸತೀಶ್
ವಿನಯ್ ಕುಮಾರ್ ಸೊರಕೆ ಎಂ.ಹೆಚ್. ಅಂಬರೀಷ್
ಆರ್. ಧೃವನಾರಾಯಣ

ಬೆಳಗಾವಿ ವಿಭಾಗ 

ಎಸ್.ಆರ್. ಪಾಟೀಲ್
ಮಾರ್ಗರೆಟ್ ಆಳ್ವಾ
ಆರ್.ವಿ. ದೇಶಪಾಂಡೆ
ಹೆಚ್.ಕೆ. ಪಾಟೀಲ್
ಎಂ.ಬಿ ಪಾಟೀಲ್
ಸತೀಶ್ ಜಾರಕಿಹೊಳಿ
ಸಿ.ಎಸ್. ನಾಡಗೌಡ
ಸಲೀಂ ಅಹ್ಮದ್
ಉಮಾಶ್ರೀ
ಲಕ್ಷ್ಮಿ ಹೆಬ್ಬಾಳ್ಕರ್
ಪ್ರಕಾಶ್ ಹುಕ್ಕೇರಿ

ಗುಲ್ಬರ್ಗ ವಿಭಾಗ

ಬಿ.ಕೆ. ಹರಿಪ್ರಸಾದ್
ಅಲ್ಲಂವೀರಭದ್ರಪ್ಪ
ಸಂತೋಷ್ ಲಾಡ್
ಬಿ.ಟಿ. ಪರಮೇಶ್ವರ್ ನಾಯಕ್
ಶಿವರಾಜ್ ತಂಗಡಗಿ
ಬಸವನಗೌಡ ಬಾದರ್ಲಿ
ಬಿ.ವಿ ನಾಯಕ್

Leave a Comment