ನಾಲ್ಕು ಕ್ಷುದ್ರಗ್ರಹ ಕುಟುಂಬಗಳು ಪತ್ತೆ

ಉತ್ತನೂರು ವೆಂಕಟೇಶ್

ತುಂಬಾ ಎಳೆಯದಾದ ನಾಲ್ಕು ಕ್ಷುದ್ರಗ್ರಹ ಕುಟುಂಬಗಳನ್ನು ಬ್ರೆಸಿಲೆನ  ವಿಜ್ಞಾನಿಗಳ ತಂಡ ಇತ್ತೀಚೆಗೆ ಪತ್ತೆ ಮಾಡಿದೆ. ಈ ನಾಲ್ಕು ಕುಟುಂಬಗಳಲ್ಲಿ ಒಟ್ಟು ೧೩ ಗ್ರಹಗಳಿವೆ, ಇವು ಗುರು ಮತ್ತು ಮಂಗ ಗ್ರಹಗಳ ಕಕ್ಷೆಯ ನಡುವಿನ  ಕ್ಷುದ್ರ ಗ್ರಹಗಳ ಸಮೂಹದ ಭಾಗವಾಗಿವೆ. ಈ ಕುಟುಂಬಗಳು ಕೇವಲ ೭ ದಶಲಕ್ಷವರ್ಷಗಳ ಹಿಂದಿನವಾಗಿವೆ ಎಂದು ಬ್ರೆಸಿಲೆ ನಗುರುವಾಟಂಗ್ ಗುಯಟೆಯಲ್ಲಿರುವ ಸಾವೊ ಪೋಲೊ  ವಿಶ್ವವಿದ್ಯಾನಿಲಯದ ಪ್ರೋಫೆಸರ್ ವೆಲೋರಿಯೆಕ್ ರುಬ್ಬಾ ಹೇಳಿದ್ದಾರೆ.

ನಲಕ್ಕು ಹೊಸ ಕ್ಷುದ್ರಗ್ರಹ ಕುಟುಂಬಗಲನ್ನು  ಬ್ರೆಸಿಲ್ ವಿಜ್ಞಾನಿಗಳ ತಂಡ ಪತ್ತೆ ಅಚ್ಚಿದೆ.
ಇವು ಅಸ್ಟಿರಾಯಿಡ್ ಬೆಲ್ಟ್ ( ಕ್ಷುದ್ರಗ್ರಹಗಳ ಸಮೂಹ) ವಲಯದಲ್ಲಿವೆ.
ನಾಲ್ಕು ಕುಟುಂಬಗಳಲ್ಲಿ ಒಟ್ಟು 13 ಗ್ರಹಗಳಿವೆ. ಇವುಗಳ ವಯೋಮಾನವನ್ನು 7 ದಶಲಕ್ಷ ವರ್ಷಗಳು ಎಂದು ಅಂದಾಜಿಸ ಲಾಗಿದೆ. ಸೂರ್ಯನಿಂದ 350 ದಶಲಕ್ಷ ಕಿ.ಮೀ. ದೂರದಲ್ಲಿರುವ ಇವು  ಸೂರ್ಯನ ಸುತ್ತ ಸುತ್ತು ತ್ತಿವೆ. ಇವುಗಳ ಶೋಧನಾ ವರದಿ ರಾಯಲ್ ಅಸ್ಟ್ರನಾಮಿಕಲ್  ಸೊಸೈಟಿ ನಿಯತ ಕಾಲಿಕದ  ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

30vichara1

ಗುರು ಮತ್ತು ಮಂಗಳ ಗ್ರಹಗಳ ಕಕ್ಷೆಗಳ ನಡುವೆ ಬಹು ವಿಸ್ತಾರದ  ಪ್ರದೇಶದಲ್ಲಿ ಇರುವ ಕ್ಷುದ್ರಗ್ರಹಗಳ ಸಮೂಹವನ್ನು ಅಸ್ಟಿರಾಯಿಡ್ ಬೆಲ್ಟ್ ಎನ್ನುತ್ತೇವೆ. ಈಗ ಪತ್ತೆಯಾಗಿರುವ ನಾಲ್ಕು ಕ್ಷುದ್ರಗ್ರಹ ಕುಟುಂಬಗಳೂ ಈ ವ್ಯಾಪ್ತಿಯಲ್ಲಿದ್ದು, ಇವುಗಳ  ವಯೊಮಾನವನ್ನು ನ್ಯೂಮೆರಿಕಲ್ ಸಿಮುಲೇಶನ್ ರೀತಿಯಲ್ಲಿ ಪತ್ತೆ ಹಚ್ಚಲಾಗಿದ್ದು ,ಇದರಲ್ಲಿ  ಬ್ಯಾಕ್ ವರ್ಡ್ ಇಂಟಿಗ್ರೆಷನ್ ಕ್ರಮವನ್ನು ಬಳಸಲಾಗಿದೆ. ಇವುಗಳ ಶೋಧನೆಯ  ವರದಿಯನ್ನು  ರಾಯಲ್ ಅಸ್ಟ್ರನಾಮಿಕಲ್  ಸೊಸೈಟಿ ನಿಯತ ಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಹೊಸ ಹೊಸ  ಸುಧಾರಿತ ಸಾಧನಗಳನ್ನು ಬಳಸಿ ಹೆಚ್ಚು ಹೆಚ್ಚು ಕ್ಷುದ್ರ ಗ್ರಹಗಳನ್ನು ಪತ್ತೆ ಹಚ್ಚ ಲಾಗುತ್ತಿದೆ. ಗುರು ಮತ್ತು ಮಂಗಳ ಗ್ರಹಗಳ ಕಕ್ಷೆಗಳ ನಡುವೆ ವ್ಯಾಪಿಸಿರುವ ಕ್ಷುದ್ರಗ್ರಹಗಳ ಸಮೂಹದಲ್ಲಿ ಸುಮಾರು ೧೦೦೦ ಕ್ಕೂ ಹೆಚ್ಚು ಕ್ಷುದ್ರ  ಗ್ರಹಗಳು ಇದ್ದು, ಇವು ಪರಸ್ಪರ  ಸಂಕೀರ್ಣ ಗುರುತ್ವಾ ಕರ್ಷಣೆಯನ್ನು ಹೊಂದಿವೆ

ಸೂರ್ಯನ ಸುತ್ತ ಸುತ್ತುವ ಕ್ಷುದ್ರ ಗ್ರಹಗಳಿಗೆ ನಿರ್ದಿಷ್ಟ ಕಕ್ಷೆಯಾಗಲಿ ಅಥವಾ ಆಕಾರವಾಗಲಿ ಇಲ್ಲ. ಹಾಗೆಯೇ ಇವುಗಳ ಮೇಲ್‌ಮೈ ಸಮತಟ್ಟಾಗೂ ಇಲ್ಲ.  ಇವುಗಳ ನಿರಂತರ ಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಸುಮಾರು ೪೦೦೦ ದಷ್ಟು ಈ ಗ್ರಹಗಳ ಕಕ್ಷೆಗಳನ್ನು ಪತ್ತೆ ಮಾಡಿದ್ದಾರೆ.

ಸೂರ್ಯನ ಸುತ್ತ ಸುತ್ತುವ ಇವು ಒಮ್ಮೊಮ್ಮೆ  ಭೂಮಿಯ ಸಮೀಪದಲ್ಲಿ ಹಾದು ಹೋಗುತ್ತವೆ. ಹೀಗೆ ಹಾದು ಹೋಗುವಾಗ ಭೂಮಿಗೆ ಅಪ್ಪಳಿಸುವ ಅಪಾಯವೂ ಇದೆ, ಈ ಹಿಂದೆ ಅಮೇರಿಕಾದ ಆರಿಜೋನಾದಲ್ಲಿ ಕ್ಷುದ್ರ ಗ್ರಹವೊಂದು ಅಪ್ಪಳಿಸಿತ್ತು . ಅದು ಅಪ್ಪಳಿಸಿದ ರಭಸಕ್ಕೆ  ಅದು ಬಿದ್ದ ಸ್ಥಳದಲ್ಲಿ  ೮೦೦ ಮೀಟರ್ ವ್ಯಾಪ್ತಿಯ ಹಾಗೂ ೧೮೦ ಮಿಟರ್ ಅಳದ ಹಳ್ಳ ಸೃಷ್ಠಿಯಾಗಿತ್ತು.

ಮೊದಲ ಬಾರಿಗೆ ಕ್ಷುದ್ರಗ್ರಹವೊಂದು ಪತ್ತೆ ಯಾದದ್ದು ೧೮೦೧ರಲ್ಲಿ .ಅದನ್ನು ಸೈರಸ್ ಎಂದು ಕರೆಯಲಾಯಿತು. ಅದು ಈವರೆಗೆ ಪತ್ತೆಯಾದ ಕ್ಷುದ್ರ ಗ್ರಹಗಳಲ್ಲೇ ಅತೀ ದೊಡ್ಡದಾಗಿದ್ದು   ವಿಜ್ಞಾನಿಗಳು ಅದಕ್ಕೆ ಕುಬ್ಜಗ್ರಹ  ಸ್ಥಾನ ನೀಡುವ ಯೋಚನೆಯಲ್ಲಿದ್ದಾರೆ.

Leave a Comment