ನಾಲ್ಕು ಕಾಲಮಾನಗಳ ಸುವರ್ಣ ಸುಂದರಿ’

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ತಯಾರಾಗುತ್ತಿದೆ ‘ಸುವರ್ಣ ಸುಂದರಿ’. ಹೆಸರು ಕೇಳಿದರೆನೇ ಯಾವುದೋ ಕಾಲದ್ದು ಎನಿಸುತ್ತದೆ. ಅದಕ್ಕೆ ತಕ್ಕ ಹಾಗೆ ನಾಲ್ಕು ಕಾಲಮಾನಗಳ ಕಥೆಯ ಚಿತ್ರ ಇದಾಗಿದೆ ಎನ್ನುತ್ತಾರೆ ಕನ್ನಡಕ್ಕೆ ಹೊಸಬರು ಆದರೆ ತೆಲುಗಿನಲ್ಲಿ ಈಗಾಗಲೇ ೨ಚಿತ್ರ ನಿರ್ದೇಶಿಸಿರುವ ಸೂರ್ಯ.

೧೬ನೇ ಶತಮಾನ, ೬೦೦ ಮತ್ತು ೩೦೦ ವರ್ಷಗಳ ಹಾಗು ಪ್ರಸ್ತುತದ ಕಥೆ ಇರುತ್ತದೆ. ೧೯೬೦ ಹೇಗಿತ್ತು ಎನ್ನುವುದನ್ನು ಚಿತ್ರ ಕಟ್ಟಿಕೊಡುತ್ತದೆ ಎನ್ನುವ ವಿವರ ನೀಡಿದ ಸೂರ್ಯ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಹಿರಿಯ ನಟಿಯರಾದ ಹಿಂದಿಯ ರೇಖಾ ಮತ್ತು ಜಯಪ್ರದಾ ಅವರನ್ನು ಕರೆತರಲು ಪ್ರಯತ್ನಿಸುತ್ತಿದ್ದಾರಂತೆ. ಇದೊಂದು ವಜ್ರದ ಸುತ್ತ ನಡೆಯುವ ಕಥೆ ಎಂದ ಅವರು ಚಿತ್ರವನ್ನು ಸ್ವತಃ ನಿರ್ಮಿಸುತ್ತಿದ್ದಾರೆ.

ಸುವರ್ಣ ಸುಂದರಿಯ ಪ್ರಮುಖ ಪೋಸ್ಟರ್‌ನಲ್ಲಿ ಮೇಲಿನ ಚಿತ್ರವನ್ನು ಬಿಂಬಿಸುವಂತೆ ಕೆಳಗಿನ ಭಾವ ಚಿತ್ರವಿದೆ. ಆದರೆ ಬಿಂಬಿತವಾಗಿರುವುದು ಒಂದೇ ಹೆಣ್ಣಿನ ವಿಭಿನ್ನ ಅಲಂಕಾರದ ಚಿತ್ರವಾಗಿದೆ. ಪೋಸ್ಟರ್‌ನಲ್ಲಿ ಈ ಪ್ರಾಮುಖ್ಯತೆ ಪಡೆದುಕೊಂಡಿರುವ ಪಾತ್ರದಲ್ಲಿ ನಟಿಸುತ್ತಿರುವ ಸಾಕ್ಷಿ ಚೌಧುರಿ ತೆಲುಗಿನ ಪೋಟುಗಾಡು, ಜೆಮ್ಸ್ ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ. ವಿಶೇಷವೆಂದರೆ ಅವರು ವಹಿಸುತ್ತಿರುವ ಪಾತ್ರ ನಾಲ್ಕು ಕಾಲ ಮಾನದಲ್ಲಿ ಇರುತ್ತದೆಂದು ಹೇಳಿಕೊಂಡರು.

ಇನ್ನೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಪೂರ್ಣ ಕನ್ನಡದವಳು ಇಲ್ಲಿಯೇ ‘ಜೋಷ್ ಚಿತ್ರದಲ್ಲಿಯೇ ಮೊದಲು ನಟಿಸಿದ್ದು. ಆದರೆ ನಂತರದಲ್ಲಿ ಒಳ್ಳೆ ಅವಕಾಶಗಳಿಂದಾಗಿ ತೆಲುಗಿಗೆ ವಲಸೆ ಹೋಗಿದ್ದಾಳೆ ತಮಿಳಿನಲ್ಲಿಯೂ ನಟಿಸುತ್ತಿದ್ದಾಳೆ. ಈ ಚಿತ್ರದಿಂದ ಅವಳ ಪಾಲಿಗೆ ಕನ್ನಡದ ಮತ್ತೊಂದು ಅವಕಾಶ ಸಿಕ್ಕಿದೆ.

ಆದರೆ ಅವಳು ತೆಲುಗು ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಕ್ಕಿರುವುದರಿಂದ ತೆಲುಗಿನ ನಟಿಯಾಗಿ ಗುರುತಿಸಿಕೊಳ್ಳಲು ಹೆಚ್ಚ ಇಷ್ಟಪಡುತ್ತಿದ್ದಾಳೆನಿಸುತ್ತದೆ. ಎರಡು ಭಾಷೆಯಲ್ಲಿ ‘ಸುವರ್ಣ ಸುಂದರಿ’ ತಯಾರಾಗುತ್ತಿರುವುದರಿಂದಾಗಿ ಮತ್ತೆ ಕನ್ನಡಕ್ಕೆ ಬಂದಂತಿದೆ.

ಇದರಲ್ಲಿ ಅವಳದು ೧೯೬೦ಯಲ್ಲಿ ಬರುವ ಪಾತ್ರವಾಗಿದೆಯಂತೆ. ತೆಲುಗಿನವರಾದ ತಿಲಕ್, ರಾಮ್ ಮತ್ತು ಈಶ್ವರ್ ನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಗೆ ಸಂಗೀತ ನಿರ್ದೆಶಕರಾಗಿ ಕೆಲಸ ಮಾಡಿರುವ ಸಾಯಿ ಕಾರ್ತಿಕ್ ಸಂಗೀತ ನೀಡುತ್ತಿದ್ದು, ನಾಲ್ಕು ತೆಲೆಮಾರುಗಳಿಗೆ ತಕ್ಕ ಹಾಗೆ ಹಿನ್ನೆಲೆ ಸಂಗೀತ ನೀಡುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿಕೊಂಡರು.

Leave a Comment