ನಾರಾಯಣಗೌಡ ಬಿಜೆಪಿ ಹಣಕ್ಕಾಗಿ ಸೇಲ್ ಆಗಿದ್ದಾರೆ

ಕೆ.ಆರ್.ಪೇಟೆ. ಡಿ.2- ದಲಿತ ಸಮಾಜಕ್ಕೆ ನ್ಯಾಯವನ್ನು ಕೊಟ್ಟಿರುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ ಹಾಗಾಗಿ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಬಿ.ಚಂದ್ರಶೇಖರ್ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಮನವಿ ಮಾಡಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಕೆ.ಬಿ.ಚಂದ್ರಶೇಖರ್ ಎರಡು ಭಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಾಂಗ್ರೆಸ್‍ಗೆ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಶಾಸಕರು ಬಿಜೆಪಿಯ ಹಣದಾಸೆಗೆ ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಂಡಿದ್ದಾರೆ. ಇಲ್ಲಿನ ನಾರಾಯಣಗೌಡ ನಿಮ್ಮ ಕೇಳಿ ಏನಾದರೂ ರಾಜಿನಾಮೆ ಕೊಟ್ಟಿದ್ದಾರಾ? ಇಲ್ಲಾ, ಬಿಜೆಪಿ ಹಣಕ್ಕಾಗಿ ಸೇಲ್ ಆಗಿದ್ದಾರೆ. ನಿಮ್ಮ ಕ್ಷೇತ್ರದ ಸ್ವಾಭಿಮಾನ ಮತದಾರರನ್ನು ಮಾರಿದ್ದಾರೆ. ಮತ್ತೆ ಬಿಜೆಪಿಗೆ ಮತ ಹಾಕಲ್ಲ ಮತದಾರರು. ಬಿಜೆಪಿ ಹಣ ಕಾಂಗ್ರೆಸ್‍ಗೆ ಮತ ಎಂಬಂತಾಗಿದೆ ಇಂದಿನ ಚುನಾವಣೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯರ ಸರ್ಕಾರಯಿದ್ದಾಗ ಪಟ್ಟಣದ ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಕೆ.ಯು.ಐ.ಡಿ.ಎಫ್.ಸಿ ನಿಗಮದಿಂದ 40ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪಟ್ಟಣದ ನಾಗಮಂಗಲ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿಸಿ ಶಾಸಕರಾಗಿದ್ದ ನಾರಾಯಣಗೌಡ ಮುಂಬೈ ಸೇರಿಕೊಂಡಿದ್ದರು. 6 ತಿಂಗಳಾದರು ವಾಪಸ್ ಬಾರಲಿಲ್ಲ. ರಸ್ತೆಗೆ ಅವ್ಯವಸ್ಥೆಯಿಂದ ಕೂಡಿ, ಜನರು ಪರದಾಡುತ್ತಿದ್ದರು. ಲೋಕೋಪಯೋಗಿ ಸಚಿವನಾಗಿದ್ದ ನನ್ನ ಬಳಿ ಬಂದು ಸುಮಾರು ಐದಾರು ಕೋಟಿ ಅನುಧಾನ ತಂದು ದ್ವಿಪಥ ರಸ್ತೆ ಮಾಡಿಸಿದ್ದರು. ಅಧಿಕಾರದಿಲ್ಲದಿದ್ದರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವಂತವರು ನಮ್ಮ ಅಭ್ಯರ್ಥಿ ಎಂದು ಹೇಳಿದರು.
ಭಾವುಕರಾದ ಕೆ.ಬಿ.ಸಿ: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಮಾತನಾಡಿ ತಾಲೂಕಿನ ಜನತೆಗಾಗಿ ದಿನದ 24 ಗಂಟೆಯೂ ಪಟ್ಟಣದಲ್ಲಿಯೇ ಇದ್ದು ಜನರ ಕುಂದು-ಕೊರತೆಗನ್ನು ಆಲಿಸುತ್ತಿದ್ದೇನೆ. ಎರಡು ಭಾರಿ ಸೋತಿದ್ದೇನೆ. ಈಗಲೂ ನಾನು ಸೋತರೆ ನಾನು ಬದುಕಿರುತ್ತೇನೋ, ಇಲ್ಲವೋ ಗೊತ್ತಿಲ್ಲ ಎನ್ನುವಾಗ ಭಾವುಕರಾದ ಕೆ.ಬಿ.ಚಂದ್ರಶೇಖರ್ ದಯಮಾಡಿ ಈ ಭಾರಿ ಗೆಲ್ಲಿಸಿ ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ, ಕಷ್ಟ ಸುಖಗಳಿಗೆ ಜೊತೆಯಲ್ಲಿರುತ್ತೇನೆ ಎಂದರು. ನನಗೆ ಜಾತಿ, ಮತ ಎಂಬ ಬೇಧಭಾವ ಗೊತ್ತಿಲ್ಲ. ಅನರ್ಹ ಶಾಸಕ ನೀಡುವ ಆಸೆ ಆಮಿಷಗಳಿಗೆ ಒಳಗಾಗದೇ ಗೆಲ್ಲಿಸಿಕೊಡಬೇಕೆಂದು ಕೆ.ಬಿ.ಚಂದ್ರಶೇಖರ್  ಭಾವುಕರಾಗಿ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಾಂಗಾಧರ್, ಕಾಂಗ್ರೆಸ್ ಮುಖಂಡರಾದ ಗಣಿಗ ರವಿಕುಮಾರ್‍ಗೌಡ, ಗುರುಪ್ರಸಾದ್ ಕೆರೆಗೋಡು, ಸೋಮಶೇಖರ್ ಕೆರೆಗೋಡು, ಬಿ.ಪಿ.ಪ್ರಕಾಶ್,  ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಅಂಜನಾಶ್ರೀಕಾಂತ್, ನಗರಸಭೆಯ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ, ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಸಿ.ಮಂಜುನಾಥ್,  ತಾಪಂ ಮಾಜಿ ಅಧ್ಯಕ್ಷ ಜಯರಂಗ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment