ನಾಯ್ಡು ಉಪಹಾರ ಕೂಟಕ್ಕೆ ಕಾಂಗ್ರೆಸ್ ಗೈರು

ನವದೆಹಲಿ, ಆ ೧೦- ರಾಜ್ಯಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯನಾಯ್ದು ಆಯೋಜಿಸಿದ್ದ ಉಪಹಾರ ಕೂಟಕ್ಕೆ ಕಾಂಗ್ರೆಸ್ ಸದಸ್ಯರು  ಗೈರು ಹಾಜರಾದರು.

ನಿನ್ನೆಯಷ್ಟೇ ನಡೆದ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ಸಿಂಗ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಾಯ್ಡು  ಇಂದು ಬೆಳಿಗ್ಗೆ ಉಪಹಾರ ಕೂಟ ಆಯೋಜಿಸಿದ್ದರು. ಆದರೆ ಕಾಂಗ್ರೆಸ್ ಗೈರು ಹಾಜರಾಗಿರುವುದು ಕಾರಣ ತಿಳಿದು ಬಂದಿಲ್ಲ.

ನಿನ್ನೆ ನಡೆದ ಚುನಾವಣೆಯಲ್ಲಿ ಹರಿವಂಶ್ ೧೨೫ ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರನ್ನು ಸೋಲಿಸಿದ್ದರು. ಕಾಂಗ್ರೆಸ್ ನಾಯಕ ಪಿ.ಜೆ. ಕುರಿಯನ್ ನಿವೃತ್ತಿಯಿಂದ ಉಪಸಭಾಪತಿ ಸ್ಥಾನ ತೆರವಾಗಿತ್ತು.

Leave a Comment