ನಾಯಿ ಕಚ್ಚಿ ಬಾಲಕನಿಗೆ ಗಂಭೀರ ಗಾಯ

ಜೇವರ್ಗಿ,ಆ.4-ನಾಯಿ ಕಚ್ಚಿ ಬಾಲಕನೊಬ್ಬ ಗಂಭೀರವಾಗಿ ಗಾಯೊಂ‌ಡ ಘಟನೆ ಇಂದು ಮುಂಜಾನೆ ಪಟ್ಟಣದಲ್ಲಿ ನಡೆದಿದೆ.

ಶಾಲೆಗೆ ಹೋಗುತ್ತಿದ್ದ ಶಹಾನವಾಜ್ (10) ಎಂಬ ಬಾಲಕನ ಮೇಲೆ ಮೂರು ನಾಯಿಗಳು ದಾಳಿ ನಡೆಸಿ ಮೈ, ಕೈಗೆಲ್ಲಾ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿರುವ ಬಾಲಕನಿಗೆ ಇಲ್ಲಿನ ತಾಲ್ಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಕಚ್ಚಿ ಇದುವರೆಗೆ 9 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

Leave a Comment