ನಾಯಿಗಳ ದಾಳಿಗೆ ಜಿಂಕೆ ಸಾವು

ಮುಂಡಗೋಡ,ನ8 ಬೀದಿ ನಾಯಿಗಳ ದಾಳಿಗೊಳಗಾಗಿ ಭಾರೀ ಗಾತ್ರದ ಜಿಂಕೆಯೊಂದು ಮೃತಪಟ್ಟ ಘಟನೆ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಅರಣ್ಯ ಪ್ರದೇಶದಿಂದ ಗ್ರಾಮದತ್ತ ಬಂದ ಜಿಂಕೆಯನ್ನುನಾಯಿಗಳು ಬೆನ್ನಟಿಕೊಂಡು ಹೋಗಿ ಕಚ್ಚಿ ಗಾಯಗೊಳಿಸಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದ್ದು, ಸ್ಥಳಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಸುದ್ದಿ ತಿಳಿದ ಬಳಿಕವು ಅರಣ್ಯ ಇಲಾಖೆ ಸಿಬ್ಬಂದಿಗಳು ಸುಮಾರು 2 ಘಂಟೆಗಳ ನಂತರ ಸ್ಥಳಕ್ಕಾಗಿಸಿದ್ದಾರೆ.ಅಷ್ಟೊತ್ತಿಗೆ ಜಿಂಕೆ ಪ್ರಾಣ ಬಿಟ್ಟಿತ್ತು. ಬಳಿಕ ಇಲಾಖೆಯವರು ಅಂತ್ಯಸಂಸ್ಕಾರ ನಡೆಸಿದರು
ಅರಣ್ಯ ಸಿಬ್ಬಂದಿಗೆ  ಕರೆ ಮಾಡಿ ಸುದ್ದಿ ಮುಟ್ಟಿಸಿದಾಗ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಲು ವಿಳಂಬ ಮಾಡಿದರು. ತಕ್ಷಣ ಸ್ಥಳಕ್ಕೆ ಬಂದು ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿದ್ದರೆ ಅದು ಬದುಕಬಹುದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷತನವು ಜಿಂಕೆ ಸಾವಿಗೆ ಕಾರಣವಾಗಿದೆ ಎಂದು ಗ್ರಾಮ ಅರಣ್ಯ ಸಮಿತಿ ಸದಸ್ಯ ಫಕ್ಕೀರೇಶ ಬೂಕಿಯವರ, ನಾಗರಾಜ ಗುಬ್ಬಕ್ಕನವರ, ಮಂಜುನಾಥ ಕೋಣನಕೇರಿ ಸೇರಿದಂತೆ ಸನವಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

Leave a Comment