ನಾಯಕ ಅಧಿಕಾರ ಸ್ವೀಕಾರ

ಹುಬ್ಬಳ್ಳಿ, ಜು 16- ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್‍ಟೌನ ಇದರ ಪದಗ್ರಹಣ ಸಮಾರಂಭದಲ್ಲಿ  ರೋಟರಿ ಮಾಜಿ ಜಿಲ್ಲಾ ಗರ್ವನರ್ ರೋ| ಆನಂದ ಜಿ. ಕುಲಕರ್ಣಿಯವರು ನೂತನ ಅಧ್ಯಕ್ಷ ರೋ| ವಿವೇಕ ನಾಯಕ್ ಹಾಗೂ ಇತರ ಪದಾಧಿಕಾರಿಗಳಿಗೆ ಪದಗ್ರಹಣದ ಬೋಧನೆ ಮಾಡಿದರು.
ನೂತನ ಕಾರ್ಯದರ್ಶಿ ಸುಶೀಲ ಲಡ್ದಾ ಹಾಗೂ ಖಜಾಂಜಿಯಾಗಿ ಪ್ರಕಾಶ ಕಣ್ಣೂರ ಅಧಿಕಾರ ವಹಿಸಿಕೊಂಡರು.
ಈ ಸಮಾರಂಭದಲ್ಲಿ ಮುಖ್ಯಅಥಿತಿಯಾಗಿ ವಾಸುಕಿ ಬಿ, ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಸರಾಫ್ ಹಾಗೂ ಕಾರ್ಯದರ್ಶಿ ಕೌಸ್ತುಭ ಸಂಶಿಕರ ಹಾಗೂ ಇನ್ನಿತರ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Leave a Comment