ನಾಪತ್ತೆ ಪ್ರಕರಣ ಜೆಎನ್‌ಯುಗೆ ಸಿಬಿಐ ತಂಡ

ನವದೆಹಲಿ, ಜೂ. ೧೯ – ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿಯ ನಜೀಬ್ ಅಹ್ಮದ್ ನಿಗೂಢ ನಾಪತ್ತೆ ಪ್ರಕರಣದ ತನಿಖೆಗಾಗಿ ಇಂದು ಸಿಬಿಐ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದೆ.

ಜವಾಹರಲಾಲ್ ನೆಹರು ವಿ.ವಿಯ ಹಾಸ್ಟೆಲ್‌ವೊಂದರಿಂದ ವಿದ್ಯಾರ್ಥಿ ನಜೀಬ್ ಅಹ್ಮದ್, ಕಳೆದ ವರ್ಷ ಅಕ್ಟೋಬರ್ 16 ರಂದು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು.

ಈ ಕಣ್ಮರೆ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಇಂದು ವಿ.ವಿ.ಗೆ ಭೇಟಿ ನೀಡಿದ್ದ ಸಿಬಿಐ ಅಧಿಕಾರಿಗಳು ಈ ಕುರಿತಂತೆ ಸಂಬಂಧಿಸಿದವರ ತನಿಖೆ ನಡೆಸಲಿದೆ.

ವಿದ್ಯಾರ್ಥಿ ನಜೀಬ್ ಅಹ್ಮದ್ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತು ಎಂಬ ಆರೋಪದ ಬಗ್ಗೆಯೂ, ಇದರಲ್ಲಿ ಭಾಗಿಯಾಗಿದ್ದರು ಎನ್ನಲಾದ ವಿದ್ಯಾರ್ಥಿಗಳ ವಿಚಾರಣೆ ನಡೆಸಲಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳನ್ನು ಕಣ್ಮರೆಯಾಗಿರುವ ವಿದ್ಯಾರ್ಥಿಯ ತಾಯಿ ಫಾತಿಮಾ ನಫೀಜ್ ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕಣ್ಮರೆಯಾಗಿರುವ ವಿದ್ಯಾರ್ಥಿಯ ತಾಯಿ ಫಾತಿಮಾ ನಫೀಜ್ ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.

Leave a Comment