ನಾಪತ್ತೆಯಾಗಿದ್ದ ವ್ಯಕ್ತಿಯ ಬುರುಡೆ ಪತ್ತೆ

ಕಾಸರಗೋಡು, ಅ.೨೩- ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ದೇಲಂಪಾಡಿಯ ವ್ಯಕ್ತಿಯೋರ್ವನ ತಲೆಬುರುಡೆ ಅರಣ್ಯದಲ್ಲಿ ಪತ್ತೆಯಾದ ಘಟನೆ ನಡೆದಿದೆ. ದೇಲಂಪಾಡಿ ನೂಜಿಬೆಟ್ಟುವಿನ ಶಶಿಧರ(೩೫) ನಾಪತ್ತೆಯಾಗಿದ್ದವರು. ೨೦೧೮ರಲ್ಲಿ ಶಶಿಧರ ನಾಪತ್ತೆಯಾಗಿದ್ದರು. ಸಂಬ೦ಧಿಕರು ದೂರು ನೀಡಿ ಆದೂರು ಪೊಲೀಸರು ತನಿಖೆ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ೨೦೧೯ರ ಮೇ ತಿಂಗಳಲ್ಲಿ ದೇಲಂಪಾಡಿ ರಕ್ಷಿತಾರಣ್ಯದಲ್ಲಿ ದೇಹದ ಅವಶೇಷಗಳು ಮತ್ತು ವಸ್ತ್ರ ಪತ್ತೆಯಾಗಿದ್ದವು.ಈ ಬಗ್ಗೆ ಖಚಿತ ಪಡಿಸಲು ಅವಶೇಷಗಳನ್ನು ಫಾರೆನ್ಸಿಕ್ ತಪಾಸಣೆಗೆ ಕಳುಹಿಸಲಾಗಿತ್ತು. ತಪಾಸಣೆಯಿಂದ ಶಶಿಧರ ಅವಶೇಷಗಳು ಎಂದು ಖಚಿತಗೊಂಡಿತ್ತು. ಸಂಬಂಧಿಕರು ಈ ಸ್ಥಳಕ್ಕೆ ತೆರಳಿದ್ದ ಸಂದರ್ಭದಲ್ಲಿ ತಲೆಬುರುಡೆ ಪತ್ತೆಯಾಗಿದೆ. ಆದೂರು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment