‘ನಾನೂ ಪ್ರಧಾನಿಯಾಗುತ್ತೇನೆ’

ಮಂಗಳೂರು, ಜ.೧೨- ಮುಂಬರುವ ಚುನಾವಣೆಯಲ್ಲಿ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಇಳಿಯಲು ಬಯಸಿದ್ದೆ. ಆದರೆ ತಂದೆ ಒಪ್ಪಿಗೆ ನೀಡಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ತಂದೆಯನ್ನು ಒಪ್ಪಿಸಿ ರಾಜಕೀಯ ಪ್ರವೇಶ ಮಾಡಲಿದ್ದೇನೆ. ನನಗೆ ೬೦ ವರ್ಷ ಆಗುವ ವೇಳೆಗೆ ನಾನೂ ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ ಎಂದು ಹುಚ್ಚ ವೆಂಕಟ್ ಹೇಳಿದರು. ತಮ್ಮ ‘ಡಿಕ್ಟೇಟರ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಕಲಿ ಮತ ಹಾಕದಂತೆ ಜನತೆಗೆ ಮನವಿ ಮಾಡಿದರು. ಅಲ್ಲದೆ ಹಣ, ಸೀರೆ, ಹೆಂಡಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳಬಾರದು ಎಂದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಬಹಳ ನೋವಾಗಿದೆ. ನಾವೆಲ್ಲರೂ ಪ್ರೀತಿಯಿಂದ ಇರೋಣ, ಹಿಂಸಾಚಾರ ಬೇಡ. ನಮ್ಮನ್ನು ದೂರ ಮಾಡಲು ಬರುವವರ ಜತೆ ನಾವು ಹೋಗುವುದು ಬೇಡ. ಬದಲಿಗೆ ಒಗ್ಗಟ್ಟಿನಿಂದ ಇದ್ದು, ಶಾಂತಿ ಕದಡಲು ಬರುವವರನ್ನು ಯಾವ ರೀತಿ ಎದುರಿಸಬೇಕೆಂಬುದನ್ನು ತಿಳಿಯಬೇಕು ಎಂದರು. ‘ಡಿಕ್ಟೇಟರ್’ ಚಿತ್ರದಲ್ಲಿ ಪತ್ರಕರ್ತನಾಗಿ ತಾನು ನಟಿಸುತ್ತಿದ್ದು, ಪತ್ರಕರ್ತರ ಕಷ್ಟ-ಸುಖಗಳನ್ನು ತೆರೆಯ ಮೇಲಿಡಲಾಗುವುದು. ಚಿತ್ರಕಥೆ, ನಿರ್ದೇಶನ, ನಟನೆಯ ಜತೆ ಚಿತ್ರದಲ್ಲಿ ಐದಾರು ಹಾಡುಗಳನ್ನು ತಾವೇ ಹಾಡುತ್ತಿರುವುದಾಗಿಯೂ ಹೇಳಿದರು.

Leave a Comment