ನಾನು ಬಯಸುವ ಸರ್ವ ಗುಣ ಸಂಪನ್ನ ಸಿಕ್ಕರೆ ಕೂಡಲೇ ಪ್ರೀತಿಸುತ್ತೇನೆ- ಶ್ರುತಿಹಾಸನ್

ಚೆನ್ನೈ, ಅ.9 – ಬಹುಭಾಷಾ ನಟ ಕಮಲ್‌ಹಾಸನ್ ಪುತ್ರಿ ಶ್ರುತಿ ಹಾಸನ್ ಕುರಿತು ಹೇಳಲು ಯಾವುದೇ ವಿಶೇಷ ಇಲ್ಲ.  ಪ್ರತಿಭೆ ಮತ್ತು ಸೌಂದರ್ಯದ  ಖನಿಯಾಗಿರುವ  ಶ್ರುತಿಹಾಸನ್  2009ರಲ್ಲಿ ಬಾಲಿವುಡ್ ಸಿನಿಮಾ  ‘ಲಕ್ ‘ ಮೂಲಕ  ಚಿತ್ರರಂಗ ಪ್ರವೇಶಿಸಿ ನಂತರ ತೆಲುಗು, ತಮಿಳು ಚಿತ್ರರಂಗದಲ್ಲಿ  ಸರಣಿ ಸಿನಿಮಾಗಳಲ್ಲಿ ಕಾಣಿಸಿಕೊಂಡು ಜನಪ್ರಿಯ ನಾಯಕಿಯಾಗಿ ಹೊರಹೊಮ್ಮಿದ್ದರು.

2017ರಲ್ಲಿ ತೆರೆಕಂಡ ತೆಲುಗಿನ ಪವನ್ ಕಲ್ಯಾಣ್  ನಾಯಕರಾಗಿ ನಟಿಸಿದ್ದ  ‘ಕಾಟಮರಾಯಡು’ ಚಿತ್ರದ ನಂತರ ಶ್ರುತಿಹಾಸನ್  ಅಭಿನಯಕ್ಕೆ ಕೊಂಚ ವಿರಾಮ ನೀಡಿದ್ದರು.

ಆ ಸಮಯದಲ್ಲಿ, ತಮ್ಮ ಇಟಾಲಿಯನ್ ಬಾಯ್ ಫ್ರಂಡ್  ಮೈಕೆಲ್ ಕೊರ್ಸೇಲ್ ಜೊತೆ ಸುತ್ತಾಟ ನಡೆಸಿದರು. ಈ ಜೋಡಿ ಲಾಸ್ ಏಂಜಲೀಸ್, ಚೆನ್ನೈ ಮತ್ತು ಮುಂಬೈ  ಮತ್ತಿತರ ನಗರಗಳಲ್ಲಿ ಕಾಣಿಸಿಕೊಂಡು ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂಭ್ರಮಿಸಿತು.  ಕೆಲ ವರ್ಷಗಳ ಕಾಲ ಮುಂದುವರಿದ ಸುತ್ತಾಟದ ನಂತರ ಅವರ ಸಂಬಂಧ ಈ ವರ್ಷದ ಏಪ್ರಿಲ್‌ನಲ್ಲಿ ಅಂತ್ಯಗೊಂಡ ಸಂಗತಿ ವರದಿಯಾಗಿದೆ.

ಈ ನಡುವೆ  ಮಂಚುಲಕ್ಷ್ಮಿ ನಿರೂಪಕಿಯಾಗಿ ನಡೆಸಿಕೊಡುವ ಹೊಸ ರಿಯಾಲಿಟಿ ಶೋ ನಲ್ಲಿ ಶೃತಿ ಹಾಶನ್ ಕಾಣಿಸಿಕೊಂಡರು.  ಕಾರ್ಯಕ್ರಮದಲ್ಲಿ  ಮೈಕೆಲ್ ಜೊತೆ ಬ್ರೇಕ್‌ಅಪ್, ಜೀವನ…  ಮತ್ತಿತರ ಅಂಶಗಳ ಕುರಿತು ತಮ್ಮ ಆಲೋಚನೆ ಹೇಳಿಕೊಂಡುಬಂದರು..  ಮೈಕೆಲ್ ಜೊತೆಗಿನ ಸಂಬಂಧ ತನಗೆ ಒಳ್ಳೆ ಅನುಭವ ಉಳಿಸಿಹೋಗಿದೆ. ನಾನು ಮೂಲತಃ  ಅಮಾಯಕಿ ಇದನ್ನು ಗಮನಿಸಿ  ತನ್ನ ಸುತ್ತಮುತ್ತ ಇರುವವರು ನನ್ನ ಮೇಲೆ ಅಧಿಕಾರ ಚಲಾಯಿಸಿ ಯಜಮಾನರ ರೀತಿ ವರ್ತಿಸುತ್ತಾರೆ. ನನ್ನಲ್ಲಿ ಬಾವೋದ್ವೇಗ ಜಾಸ್ತಿ  ಹಾಗಾಗಿ ನನ್ನ ಸುತ್ತ ಇರುವವರು ನನ್ನನ್ನು ಅವರ ಅಧೀನದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಎಲ್ಲ ಅನುಭವಗಳು ತಮ್ಮಲ್ಲಿ ಒಳ್ಳೆ ಅನುಭವ ಉಳಿಸಿವೆ ಎಂದು ಶೃತಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ..  ಜೀವನದಲ್ಲಿ  ಸರಿಯಾದ ವ್ಯಕ್ತಿಗಾಗಿ ಎದುರುನೋಡುತ್ತಿದ್ದೇನೆ ಎಂದು ಶೃತಿ ಹೇಳಿದ್ದಾರೆ.

ತಾನು ಬಯಸುವ ಸರ್ವ ಗುಣ ಹೊಂದಿರುವ ವ್ಯಕ್ತಿ  ಎದುರಾದರೆ.. ಕೂಡಲೇ ಆತನನ್ನು ಪ್ರೀತಿಸುತ್ತೇನೆ. ಆತನನ್ನು ಜಗತ್ತಿಗೆ ಪರಿಚಯಿಸುತ್ತೇನೆ ಎಂದು ಶ್ರುತಿ ಹೇಳಿಕೊಂಡಿದ್ದಾರೆ.  ಪ್ರೀತಿ, ಪ್ರೇಮದಲ್ಲಿ  ಬೀಳಲು ಯಾವುದೇ ನಿರ್ದಿಷ್ಟ ಸೂತ್ರಗಳಿಲ್ಲ. ಒಂದು ಸಮಯದಲ್ಲಿ ಉತ್ತಮವಾಗಿ ಕಾಣುವ ವ್ಯಕ್ತಿ  ಅದೇ ಸಮಯದಲ್ಲಿ ಕೆಟ್ಟದಾಗಿಯೂ ಕಾಣುತ್ತಾನೆ. ಇಂತಹ ವಿಷಯಗಳ ಬಗ್ಗೆ ನಾನು ಚಿಂತಿಸುವುದಿಲ್ಲ ಇವೆಲ್ಲವನ್ನೂ ಕಲಿಯಲು ತಮಗೆ ಸಾಕಷ್ಟು ಅನುಭವಗಳು ಅವಕಾಶ ನೀಡಿವೆ ಎಂದು ಶೃತಿ ಹೇಳಿಕೊಂಡಿದ್ದಾರೆ.  ಇವೆಲ್ಲವೂ ತಮ್ಮಲ್ಲಿ  ಉತ್ತಮ ಅನುಭವಗಳನ್ನು ಉಳಿಸಿಹೋಗಿವೆ ಅವರು ಎಂದು ತಿಳಿಸಿದ್ದಾರೆ.

Leave a Comment