ನಾನು ಕ್ಷೇಮ ವದಂತಿಗೆ ಕಿವಿಗೂಡದಿರಿ- ದ್ವಾರಕೀಶ್ ಮನವಿ

ಬೆಂಗಳೂರು, ಜು. ೧೬- ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ನಟ ದ್ವಾರಕೀಶ್ ಆರೋಗ್ಯ ಸಂಬಂಧ ಹರಿದಾಡುತ್ತಿರುವ ವದಂತಿ ಎಲ್ಲಾ ಶುದ್ದ ಸುಳ್ಳು ಎಂದು ಅವರ ಆಪ್ತ ಕೆ.ಎಮ್.ಚೈತನ್ಯ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಸಾಮಾಜಿಕ ಜಾಲತಾಣದಲ್ಲಿ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡುತ್ತಿವೆ. ಆದರೆ ಇವೆಲ್ಲವೂ ಸುಳ್ಳು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇವರ ಅನುಗ್ರಹದಿಂದ ದ್ವಾರಕೀಶ್ ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ದಯವಿಟ್ಟು ಹರಡಿಸಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸ್ವತಃ ದ್ವಾರಕೀಶ್ ಅವರೇ, ನಾನಿನ್ನೂ ಬದುಕಿದ್ದೇನೆ. ಆರೋಗ್ಯವಾಗಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಾನು ನಿಮ್ಮ ದ್ವಾರಕೀಶ್, ಕರ್ನಾಟಕದ ಕುಳ್ಳು, ಆರೋಗ್ಯವಾಗಿದ್ದೇನೆ, ಚೆನ್ನಾಗಿದ್ದೇನೆ, ಹುಷಾರಾಗಿದ್ದೇನೆ, ಯಾವುದೇ ತರದ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ. ಮುಂದೆ ಏನಾದರೂ ನಿಮಗೆ ಗೊತ್ತಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಚೆನ್ನಾಗಿದ್ದೇನೆ, ಚೆನ್ನಾಗಿರುತ್ತೇನೆ, ಎಲ್ಲಾ ಆ ರಾಘವೇಶ್ವರ ಸ್ವಾಮೀಜಿಗಳ ಆಶೀರ್ವಾದ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

Leave a Comment