ನಾನು ಕಳಂಕರಹಿತ ರಾಜಕಾರಣಿ : ಶಾಸಕ ಎಚ್.ವಿಶ್ವನಾಥ್

ಹುಣಸೂರು. ಜೂ.16- ನನ್ನ ನಲವತ್ತು ವರ್ಷದರಾಜಕಿಯ ಇತಿಹಾಸದಲ್ಲಿ ಹಲವಾರುಜನಪರ ಅಭಿವೃದಿ ಯೋಜನೆಗಳನ್ನು ರೂಪಿಸುವ ಮೂಲಕ ಕಳಂಕರಹಿತ ರಾಜಕಿಯ ಜೀವನ ನಡೆಸುತ್ತ ಬಂದ ನನನ್ನು ರೋಲ್‍ಕಾಲ್ ಶಾಸಕ ಎಂದು ಬಿಂಬಿಸಿರುವ ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷರು ಒಂದು ಗ್ರಾ.ಪಂ ಚುನಾವಣೆ ಗೆದ್ದು ತೋರಿಸಲ್ಲಿ ಎಂದು ಶಾಸಕ ಎಚ್.ವಿಶ್ವನಾಥ್ ಸವಾಲೆಸೆದಿದ್ದಾರೆ.
ನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಬಿ.ಎಸ್.ಯೋಗಾನಂದ ಕುಮಾರ್ ನನ್ನ ಹಾಗೂ ನನ್ನ ಮಗ ಅಮೀತ್ ವಿರುದ್ದ ಮಾಡಿರುವ ಸುಳ್ಳು ಆರೋಪಕ್ಕೆ ಶಿಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದು, ಅದಕೇಂದೆ ಕೆಲ ವಕೀಲರುಗಳ ಒಂದು ತಂಡ ರಚನೆ ಮಾಡುತ್ತಿದ್ದು, ತಂಡದ ಮೂಲಕ ಅವರ ಆರೋಪಗಳಿಗೆ ಪ್ರತ್ಯುತರ ನೀಡಲಿದ್ದೆನೆ ಎಂದ ಅವರು ನನ್ನ ಮಗನ ಬೆಳೆವಣಿಗೆ ಸಹಿಸದೆ ಅವನನ್ನು ಹಣಿಯಲ್ಲು ಬಿ.ಜೆ.ಪಿಯವರು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದರು.
ಬಿ.ಜೆ.ಪಿ ನಗರ ಅಧ್ಯಕ್ಷ ರಾಜೇಂದ್ರರವರ ಅಕ್ರಮಗಳಿಗೆ ನಗರಸಭೆ ಬೆಂಬಲಿಸಲಿಲ್ಲ ಎಂದು ನನ್ನ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ದ ಹರಿದಾಯ್ದಿರುವ ರಾಜೇಂದ್ರರವರಿಗೆ ಅಧಿಕಾರಿಗಳೆ ಕಾನೂನಾತ್ಮಕವಾಗಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಸುದ್ದಿಗೊಷ್ಠಿಯಲ್ಲಿ ನಗರಸಭೆ ಮಾಜಿಅಧ್ಯಕ್ಷ ಶಿವಕುಮಾರ್ಮ ಜೆ.ಡಿ.ಎಸ್‍ತಾಲ್ಲೂಕು ಅಧ್ಯಕ್ಷ ಮಾದೇಗೌಡ, ಮುಖಂಡರಾದ ಕುನ್ನೆಗೌಡ, ಫಜಲ್, ಶಿವಶೇಖರ್, ಸತೀಶ್, ಪುಟ್ಟರಾಜು, ಹೊನ್ನಯ ಸೇರದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Comment