ನಾನು ಕನ್ನಡಿಗ ಆಗಿದ್ದೆ- ಸೋನು ನಿಗಮ್

 

ಬೆಂಗಳೂರು, ಫೆ ೨೭- ಬಾಲಿವುಡ್‌ನ ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ಅವರು ನಾನು ಕನ್ನಡಿಗನಾಗಿ ಹುಟ್ಟಿದೆ ಎಂದು ಹೇಳುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

೧೨ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕ ಸೋನು ನಿಗಮ್ ಕನ್ನಡದ ಬಗ್ಗೆ ಮಾತನಾಡಿದ್ದಾರೆ.

ನಾನು ನನ್ನ ಹಿಂದಿನ ಜನ್ಮದಲ್ಲಿ ಕನ್ನಡಿಗ ಆಗಿದ್ದೇ ಎಂದು ಬಲವಾಗಿ ನಂಬುತ್ತೇನೆ. ಯಾಕೆಂದ್ರೆ, ನಾನು ಹಿಂದಿ ಹಾಡು ಹಾಡಲು ಬಂದಿದ್ದೆ. ಆದರೆ, ಹಿಂದಿಗಿಂತ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕನ್ನಡ ಜನರ ಬಗ್ಗೆ ನನಗೆ ತುಂಬ ಗೌರವ ಇದೆ. ನಿಮ್ಮ ಪ್ರೀತಿ ಪಡೆಯಲು ಹೆಮ್ಮೆ ಆಗುತ್ತದೆ ಎಂದಿದ್ದಾರೆ ಈ ಗಾಯಕ.

ನಾನು ಯಾವುದೇ ದೇಶದಲ್ಲಿ ಕಾರ್ಯಕ್ರಮ ಮಾಡುತ್ತಿದ್ದರೂ, ಒಂದು ಧ್ವನಿ ಜೋರಾಗಿ ‘ಕನ್ನಡ’ ಎಂದು ಬರುತ್ತದೆ. ಆಗ ನಾನು ‘ಅನಿಸಿಸುತ್ತಿದೆ ಯಾಕೋ ಇಂದು..” ಅಂತ ಹಾಡು ಹಾಡುತ್ತೇನೆ ಎಂದು ಸ್ಮರಿಸಿದ್ದಾರೆ ಸೋನು.

Leave a Comment