ನಾನು ಆರಾಮವಾಗಿದ್ದೇನೆ- ದರ್ಶನ್

ಮೈಸೂರು, ಮಾ 5- ತೀವ್ರ ಹೊಟ್ಟೆನೋವಿನಿಂದ ನಿನ್ನೆ ಆಸ್ಪತೆಗೆ ದಾಖಲಾಗಿದ್ದ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಕ್ರಿಯಿಸಿ ನನಗೆ ಏನೂ ಆಗಿಲ್ಲ, ಆರಾಮಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಬಳಿಕ ಆಸ್ಪತ್ರೆಗೆ ದಾಖಲಾಗಿ ಅಭಿಮಾನಿಗಳಿಗೆ ಆತಂಕ ಮೂಡಿಸಿದ ದರ್ಶನ್ ಅವರ ಮೈಸೂರಿನ ಕೊಲಂಬಿಯಾ ಏಷಿಯಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.

ಆಸ್ಪತ್ರೆಯಿಂದ ಡಿಸ್ಟಾರ್ಚ್ ಆದ ಬಳಿಕ ಮಾತನಾಡಿದ ದರ್ಶನ್ ಅವರು ಸರಿಯಾದ ಸಮಯಕ್ಕೆ ಊಟ ತಿಂಡಿ ನೋಡಿಕೊಳ್ಳದ ಕಾರಣ ಸ್ವಲ್ಪ ಗ್ಯಾಸ್ಟ್ರಿಕ್ ಆಗಿತ್ತು. ನಮ್ಮ ಅಜೇಯ್ ಹೆಗಡೆ ಡಾಕ್ಟರ್ ಇದ್ದಾರೆ ಅವರು ನೋಡಿಕೊಂಡಿದ್ದಾರೆ. ಈಗ ಆರಾಮಾಗಿ ಇದ್ದೀನಿ ಎಂದು ತಿಳಿಸಿದರು. ಗ್ಯಾಸ್ಟ್ರೋ ಎಂಟರಾಲಜಿಸ್ಟ್ ತಜ್ಞರಾದ ಡಾ.ಅನೂಪ್ ಆಳ್ವಾ ಅವರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ದಚ್ಚುವಿನ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು ಚಿಕಿತ್ಸೆಯನ್ನು ಪಡೆದು ನಂತರ ದರ್ಶನ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ದಚ್ಚು ಸರಿಯಾಗಿ ಊಟ ಮಾಡದ ಕಾರಣಕ್ಕೆ ಅವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ದರ್ಶನ್ ಅಭಿನಯದ ’ರಾಬರ್ಟ್’ ಸಿನಿಮಾದ ಚಿತ್ರೀಕರಣ ಇನ್ನೂ ನಡೆಯುತ್ತಿದ್ದು, ಹಾಡಿನ ಶೂಟಿಂಗ್‌ಗಾಗಿ ದಚ್ಚು ವಿದೇಶಕ್ಕೆ ತೆರಳಬೇಕಿತ್ತು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ ಈ ವಿದೇಶಿ ಪ್ರವಾಸವನ್ನು ಚಿತ್ರತಂಡ ಕೈಬಿಟ್ಟಿದೆ.

Leave a Comment