ನಾಡಿದ್ದು ನಗರದಲ್ಲಿ ಗಂಗಮತಸ್ಥರ ವಿಕಾಸ ಸಭೆ

ಬಳ್ಳಾರಿ, ಸೆ.7: ಬಾರಿಕರು, ಬೆಸ್ತರು, ಮೀನುಗಾರ, ಗಂಗಾಮತ, ಪರಿವಾರ, ಕೋಲಿ, ಕಬ್ಬಲಿಗ, ಅಂಬಿಗ, ಮೊಗವೀರ ಮೊದಲಾದ 39 ಪಱ್ಯಾಯ ಪದಗಳಿಂದ ಕರೆಯುವ ಗಂಗಾಮತಸ್ಥರ ರಾಜ್ಯ ಮಟ್ಟದ 4ನೇ ವಿಕಾಸ ಸಭೆ ನಗರದಲ್ಲಿ ನಾಡಿದ್ದು ಹಮ್ಮಿಕೊಂಡಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿದ ಮತ್ತು ಸಭೆಯನ್ನು ಆಯೋಜಿಸಿರುವ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಜಿಲ್ಲಾ ಅಧ್ಯಕ್ಷ ಬಿ.ರಂಗಸ್ವಾಮಿ ಮೊದಲಾದವರು ಸೆಪ್ಟೆಂಬರ್ 9ರಂದು ನಗರದ ವಿದ್ಯಾನಗರದಲ್ಲಿನ 5ನೇ ಕ್ರಾಸ್ ನಲ್ಲಿರುವ ವೇದವಾಸ್ಯ ಮಹರ್ಷಿ ವೇದಿಕೆಯನ್ನು ಒಳಗೊಂಡಿರುವ ಗಂಗಾ ಪರಮೇಶ್ವರಿ ಸಮುದಾಯ ಭವನದಲ್ಲಿ ವಿಕಾಸಸಭೆ ಹಮ್ಮಿಕೊಂಡಿದೆ.

ವಿಕಾಸಸಭೆ ಉದ್ದೇಶಗಳನ್ನು ತಿಳಿಸಿದ ಅವರು ಸಮಾಜದ ಯುವ ಸಬಲೀಕರಣಕ್ಕಾಗಿ ಶಿಬಿರ, ಕಾರ್ಯಾಗಾರ ವಿಚಾರ ಸಂಕಿರಣ ಹಮ್ಮಿಕೊಳ್ಳುವುದು ರಾಜ್ಯ ಸಂಘದ ಚುನಾವಣೆ ನಡೆಸಲು ಮತ್ತು ಸಬಲೀಕರಣ ಮಾಡುವುದು ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಅಭಿವೃದ್ಧಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಮುದಾಯದ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಸಮುದಾಯದ ಜನತೆಗೆ ಒದಗಿಸಿಕೊಡುವುದು. ಸಮಾಜದ ಹಿರಿಯ ಚಿಂತಕ ಮಾರ್ಗದರ್ಶನದಲ್ಲಿ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಹೋರಾಟ ಮಾಡುವುದು.

ಸಂಘದ ಹೆಸರಲ್ಲಿರುವ ಆಸ್ತಿಯನ್ನು ಕೆಲವರು ತಮ್ಮದೇ ಎಂಬಂತೆ ಮಾಡಿಕೊಂಡಿರುವ ಪದಾಧಿಕಾರಿಗಳ ಮನವೊಲಿಸಿ ಪ್ರಜಾ ಸತ್ತಾತ್ಮಕ ಆಡಳಿತ ನಡೆಸುವುದು ಸೇರಿದಂತೆ ಒಟ್ಟಾರೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಬೇಕಾದ ಕಾರ್ಯಕ್ರಮಗಳನ್ನು ಸಭೆಯಲ್ಲಿ ರೂಪಿಸಲಿದೆಂದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರುಗಳಾದ ದತ್ತಾತ್ರೇಯರೆಡ್ಡಿ, ಹನುಮಂತ, ಹುಲುಗಪ್ಪ, ಚೆಲುವಪ್ಪ, ವೆಂಕಟೇಶ, ಹನುಮಂತ, ಎಂ.ಪಂಪಾಪತಿ, ಬಿ.ಜುಮರಿ, ರಂಗಸ್ವಾಮಿ ಮೊದಲಾದವರು ಇದ್ದರು.

Leave a Comment