ನಾಡಿದ್ದು ಚೇಳ್ಳಗುರ್ಕಿಯಲ್ಲಿ ನೈಸರ್ಗಿಕ ಕೃಷಿ ವಿಜ್ಞಾನ ಕಾರ್ಯಾಗಾರ

ಬಳ್ಳಾರಿ, ಜೂ.13: ತಾಲೂಕಿನ ಚೇಳ್ಳಗುರ್ಕಿ ಎಱ್ರಿತಾತ ದೇವಸ್ಥಾನದ ಸಭಾಭವನದಲ್ಲಿ ನಾಡಿದ್ದು ಬೆಳಿಗ್ಗೆ 9 ಗಂಟೆಯಿಂದ ನೈಸರ್ಗಿಕ ಕೃಷಿ ವಿಜ್ಞಾನ ಕುರಿತ ಕಾರ್ಯಾಗಾರವನ್ನು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ಹಮ್ಮಿಕೊಂಡಿದೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಫೌಂಡೇಶನ್ ಪ್ರತಿನಿಧಿ ಮೈಸೂರಿನ ನೈಸರ್ಗಿಕ ಕೃಷಿಕ ಅವಿನಾಶ್ ಅವರು, ಈ ಬಗ್ಗೆ ವಿವರಣೆ ನೀಡುತ್ತಾ ಎರಡು ದಿನಗಳ ಕಾರ್ಯಾಗಾರದಲ್ಲಿ ಅಕಾಲಿಕ ಮತ್ತು ಕಡಿಮೆ ಮಳೆ ಸಂದರ್ಭದಲ್ಲೂ ಲಾಭದಾಯಕ ಕೃಷಿ ಹೇಗೆ ಸಾಧ್ಯ ಎಂಬುದನ್ನು ಈ ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಿದೆ. ಈಗಾಗಲೇ ಈ ರೀತಿ ಕೃಷಿ ಮಾಡಿ ಯಶ ಕಂಡಿರುವ ಬಗ್ಗೆ ತಿಳಿಸಲಿದೆ.

ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ರೈತರು ಎಱ್ರಿತಾತ ದೇವಸ್ಥಾನದ ದೇಣಿಗೆಯಾಗಿ 200 ರೂಪಾಯಿ ಶುಲ್ಕ ನೀಡಬೇಕಿದೆ. ಜೂನ್ 15ರಂದು ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ನ ಹಿರಿಯ ಕಾರ್ಯನಿರ್ವಾಹಕ ಎನ್.ಲೋಕನಾಥ್, ಬರಡು ಕುಪ್ಪಂನ್ನು ಮಲೆನಾಡಿನಂತೆ ಪರಿವರ್ತಿಸಿರುವ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಸಂಗನಕಲ್ಲು ಕೃಷ್ಣ, ಮುಖಂಡರುಗಳಾದ ಬಿ.ವಿ.ಯಱ್ರಿಸ್ವಾಮಿ, ಎಂ.ಈಶ್ವರಪ್ಪ, ಜಿ.ನಾಗರಾಜು, ರಾಮಕೃಷ್ಣ, ಎಱ್ರಿತಾತ, ಕೆ.ಮಾರೆಣ್ಣ, ಕೆ.ಶಿವಪ್ಪ, ಮೊದಲಾದವರಿದ್ದರು.

Leave a Comment