ನಾಡಗೌಡರನ್ನು ಸಂಪುಟದಿಂದ ಕೈಬಿಡಲು ಒತ್ತಾಯ

ಸಿಪಿಐ, ಪಿಎಸ್‌ಐ ಅಮಾನತು ಆದೇಶ ಹಿಂಪಡೆದು
ರಾಯಚೂರು.ಜು.01- ಸಿಪಿಐ ದತ್ತಾತ್ರೇಯ ಕಾರ್ನಾಡ್ ಹಾಗೂ ಪಿಎಸ್‌ಐ ಲಿಂಗಪ್ಪ ಅವರ ಅಮಾನತು ಆದೇಶ ರದ್ದುಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಟ್ರೈಡ್ ಯುನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಪದಾಧಿಕಾರಿಗಳು ಆಗ್ರಹಿಸಿದರು.
ಅವರಿಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಜಿಲ್ಲೆಗೆ ಮುಖ್ಯಮಂತ್ರಿಗಳು ಖುದ್ದಾಗಿ ಆಲಿಸಿ ಪರಿಹಾರ ಸೂಚಿಸುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜಿಲ್ಲಾಡಳಿತ ಕಾರ್ಮಿಕರಿಗೆ ನಿರ್ಬಂಧ ವಿಧಿಸಿತ್ತು. ಎಷ್ಟರ ಮಟ್ಟಿಗೆ ಸರಿಯಾದುದ್ದು ಎಂಬ ಪ್ರಶ್ನೆ ಹಾಕಿಕೊಂಡು ಕಾರ್ಮಿಕರು ಹೇಗಾದರೂ ಮಾಡಿ ಸಿಎಂ ಭೇಟಿಯಾಗಬೇಕೆಂದು ವರ್ಷವಿಡೀ ನೆನೆಗುದಿಗೆ ಬಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಕಾರ್ಮಿಕರು ಜಿಲ್ಲಾಡಳಿತದ ನಿರ್ಬಂಧದಿಂದಾಗಿ ದಿಢೀರ್ ಪ್ರತಿಭಟನೆಗಿಳಿದಿದ್ದು ಅನಿವಾರ್ಯ ಪ್ರಸಂಗವಾಯಿತು ಎಂದರು.
ಸಿಪಿಐ ಮತ್ತು ಪಿಎಸ್‌ಐ ಅವರ ಕರ್ತವ್ಯಲೋಪವೆನಿರಲಿಲ್ಲ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸಂಪೂರ್ಣವಾಗಿ ಜಿಲ್ಲಾಡಳಿತದ ವೈಫಲ್ಯಕ್ಕೆ ಕಾರಣವಾಗಿದೆ. ಕಳೆದ 14 ತಿಂಗಳು ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ. ಕಳೆದ 5 ತಿಂಗಳಿನಿಂದಲೂ ವೈಟಿಪಿಎಸ್‌ನ ಕಾರ್ಮಿಕರನ್ನು ಕೆಲಸದಿಂದ ಹೊರಗಿಡಲಾಗಿದೆ. ಸಚಿವ ವೆಂಕಟರಾವ್ ನಾಡಗೌಡ ಹಾಗೂ ಜಿಲ್ಲಾಡಳಿತಕ್ಕೆ ಗಮನವಿದ್ದರೂ ಪರಿಹಾರ ನೀಡುವ ಬದಲಾಗಿ ಸಮಸ್ಯೆಗಳ ಉಲ್ಬಣಕ್ಕೆ ಕಾರಣರಾಗಿದ್ದಾರೆ ಎಂದು ದೂರಿದರು.
ಬೇಜವಾಬ್ದಾರಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಸಿಪಿಐ ಮತ್ತು ಪಿಎಸ್‌ಐರವರ ಮೇಲಿನ ಅಮಾನತು ಆದೇಶ ಕೂಡಲೇ ಹಿಂಪಡೆಯಬೇಕು. ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಹಾಗೂ ವೈಟಿಪಿಎಸ್‌ನ ಕಾರ್ಮಿಕರ ದೀರ್ಘಕಾಲಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಿ.ಅಮರೇಶ, ರವಿ ದಾದಾಸ್, ರಾಮರೆಡ್ಡಿ, ಮಲ್ಲಯ್ಯಸ್ವಾಮಿ, ಕೆ.ರವಿ, ನಾಗೇಶ, ವಿಜಯ, ಶಿವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment