ನಾಟ್ಯದಲ್ಲಿ ಆಹಾರ್ಯದ ಪ್ರಾಮುಖ್ಯತೆ

ವೇಷಭೂಷಣಗಳು ಹೊಂದಿಕೆಯಾಗಬೇಕು. “ಔಚಿತ್ಯಪೂರ್ಣವಾಗಿರಬೇಕು” ಎಂದು ಭರತ ಒತ್ತಿ ಹೇಳಿರುತ್ತಾನೆ. ಭರತನು ಹೇಳುವ ಹಾಗೆ, ದೇಶ ಕಾಲಕ್ಕೆ ತಕ್ಕುದಾದ ಔಚಿತ್ಯಪೂರ್ಣ ವೇಷಭೂಷಣಗಳನ್ನು ಆಸಕ್ತಿಯಿಂದ, ಭಕ್ತಿಯಿಂದ, ಆಸೆಯಿಂದ ತಯಾರಿಸಿ ನರ್ತಕರ ಹರ್ಷದಲ್ಲಿ ತಾವು ಭಾಗಿಯಾಗಿ ಸಂಭ್ರಮಿಸುವ ಭರತಾಂಜಲಿ ಕಾಸ್ಟೂಮ್ಸ್ ಎಲ್ಲಾ ನರ್ತಕ-ನರ್ತಕರಿಯರಿಗೂ ಪ್ರಿಯವಾದ ಸ್ಥಳ.

costumeಅಭಿನಯ ಕಲೆಯನ್ನು ನಾಟ್ಯದ ಎಲ್ಲಾ ಗ್ರಂಥಗಳಲ್ಲೂ ವಿವರಿಸಿದ್ದಾರೆ. ಶಾಸ್ತ್ರ ಪ್ರವೀಣರು ಅಭಿನಯವನ್ನು ನಾಲ್ಕು ವಿಧದಲ್ಲಿ ವಿಂಗಡಿಸಿದ್ದಾರೆ.

“ಅಂಗಿಕೋ ವಾಚಿಕಶ್ಚೆವ ಆಹಾರ್ಯಃ ಸಾತ್ವಿಕಸ್ತಥಾ ಚತ್ವಾರೋಭಿನಯ ಜ್ಯೋತೆವಿಜ್ಞೆಯಾ ನಾಟ್ಯ ಸಂಶ್ರಯಾಃ”

ಅಂಗೀಕಾಭಿನಯ, ವಾಚಿಕಾಭಿನಯ, ಆಹಾರ್ಯಭಿನಯ ಮತ್ತು ಸಾತ್ವಿಕಾಭಿನಯ ಅಂಗಾಂಗ ಚಲನೆಗಳಿಂದ ಮಾಡುವ ಅಭಿನಯ-ಅಂಗಿಕ ಮಾತು ಮತ್ತು ಶಬ್ದಗಳಿಂದೊಡಗೂಡಿರುವ ಅಭಿನಯ-ವಾಚಿಕ ವಸ್ತ್ರ ಮತ್ತು ಆಭರಣಗಳಿಂದ ಕೂಡಿರುವ ಅಭಿನಯ-ಆಹಾರ್ಯ ಮನೋಭಾವದಿಂದ ಮಾಡುವ ಅಭಿನಯ-ಸಾತ್ವಿಕ ಈ ನಾಲ್ಕು ವಿಧವಾಗಿರುವ ಅಭಿನಯಕ್ಕೆ ಚತುರ್ವೇದ ಅಭಿನಯ ಎಂದು ಹೇಳುತ್ತಾರೆ.

ನಾಟ್ಯಶಾಸ್ತ್ರದಲ್ಲಿ ಭರತನು ಪ್ರತಿಯೊಂದು ಅಭಿನಯದ ವಿಧವನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ವಿವರಿಸಿದ್ದಾನೆ. ಅಂತೆಯೇ ೨೩ನೇಯ ಅಧ್ಯಾಯದಲ್ಲಿ “ ಆಹಾರ್ಯ ಅಭಿನಯದ” ವಿಸ್ತಾರವನ್ನು ಕಾಣಬಹುದು. ಯಾವುದೇ ನೃತ್ಯ ಪ್ರಯೋಗದ ಯಶಸ್ಸು, ಆಹಾರ್ಯಭಿನಯವನ್ನು ಅವಲಿಂಬಿಸಿದೆ. ಇದು ನೇಪಥ್ಯಕ್ಕೆ  ಸಂಬಂಧಿಸಿರುವಂತದ್ದು.

ಹೇಗೆ ಆಹಾರ ದೇಹಕ್ಕೆ ಪೌಷ್ಠಿಕಾಂಶಗಳನ್ನು ನೀಡಿ ತಮ್ಮ ಆರೋಗ್ಯ ವೃದ್ಧಿಸುತ್ತದೆಯೋ ಹಾಗೆಯೇ ನೃತ್ಯ ಪ್ರಯೋಗದ ಯಶಸ್ವಿ ಆಗಬೇಕಾಗಿದ್ದಲ್ಲಿ ಆಹಾರ್ಯ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶ, ಕುಲ, ಸಮಾಜ, ಸಮಾಜದ ನಂಬಿಕೆ, ಜನರ ಅಭಿರುಚಿ ಅವಲಂಬಿಸಿ ನಮ್ಮ ವೇಷಭೂಷಣಗಳು ಹೊಂದಿಕೆಯಾಗಬೇಕು. “ಔಚಿತ್ಯಪೂರ್ಣವಾಗಿರಬೇಕು” ಎಂದು ಭರತ ಒತ್ತಿ ಹೇಳಿರುತ್ತಾನೆ.

ರಂಗಪ್ರವೇಶಗಳು, ನೃತ್ಯನಾಟಕಗಳು, ಶಾಲಾ-ಕಾಲೇಜಿನ ಉತ್ಸವಗಳು, ಬೇರೆ ನೃತ್ಯಶಾಲೆಗಳ ವಾರ್ಷಿಕೋತ್ಸವಗಳು, ವಿಶೇಷವಾದಂತಹ ನೃತ್ಯ ಪ್ರಯೋಗಗಳು ಹೀಗೆ ನಾನಾ ವಿಧವಾದ ಕಾರ್ಯಕ್ರಮಗಳಿಗೆ ವಿಷಯಕ್ಕೆ ಹೊಂದುವಂತಹ ಆಕರ್ಷಕ ಮನಮೋಹಿತವಾಗಿರುವ ಕಾಸ್ಟೂಮ್‌ಗಳನ್ನು ತಯಾರು ಮಾಡಬೇಕು. ನರ್ತಕರಿಗೆ ಒಂದೇ ಕಾಸ್ಟೂಮ್ ಅನ್ನುವ ಲೆಕ್ಕಕ್ಕೆ ಬಂದರೆ, ವೀಕ್ಷಕರಿಗೆ “ಅಬ್ಬಾ! ಎಂಥಹ ಸುಂದರ ಕಾಸ್ಟೂಮ್, ಎಷ್ಟೊಂದು ಬಗೆಯ ಕಾಸ್ಟೂಮ್ ಹೊಲೆಸಿಕೊಂಡಿದ್ದಾರೆ” ಎನಿಸಬೇಕು.

ಭರತನು ಹೇಳುವ ಹಾಗೆ, ದೇಶ ಕಾಲಕ್ಕೆ ತಕ್ಕುದಾದ ಔಚಿತ್ಯಪೂರ್ಣ ವೇಷಭೂಷಣಗಳನ್ನು ಆಸಕ್ತಿಯಿಂದ, ಭಕ್ತಿಯಿಂದ, ಆಸೆಯಿಂದ ತಯಾರಿಸಿ ನರ್ತಕರ ಹರ್ಷದಲ್ಲಿ ತಾವು ಭಾಗಿಯಾಗಿ ಸಂಭ್ರಮಿಸುವ, ಎಲ್ಲಾ ನರ್ತಕ-ನರ್ತಕರಿಯರಿಗೂ ಪ್ರಿಯವಾದ ಸ್ಥಳವಾಗಬೇಕು. ಕಾಸ್ಟೂಮ್‌ಗಳನ್ನು ಒಂದಕ್ಕಿಂತ ಒಂದು ಚೆಂದವಾಗಿ, ಬಣ್ಣ, ಹೊಲೆಯುವ ವೈಖರಿಗಳನ್ನು ಒಂದಕ್ಕಿಂತ ಒಂದು ಆಕರ್ಷಕವಾಗಿ  ತಯಾರು ಮಾಡಬೇಕು. ನರ್ತಕಿ ಹಾಕಿಕೊಳ್ಳುವ ಪ್ಯಾಂಟ್ ಮತ್ತು ರವಿಕೆ ಮಾತ್ರ ಒಂದೇ. ಆದರೆ ಅದಕ್ಕೆ ಪೂರಕವಾಗಿರುವ ಪ್ಯಾಂಟ್, ಬ್ಯಾಕ್ ಪೀಸ್, ಪಲ್ಲು, ಇವೆಲ್ಲಾ ಬಣ್ಣಕ್ಕೆ ಹೊಂದುವ ಬಣ್ಣಗಳಿಂದ ತಯಾರು ಮಾಡಿದರೆ, “ಖರ್ಚು ಕಡಿಮೆ, ನೋಡಲು ಬಲು ಅಂದ” ಯಾರಿಗೇ ತಾನೇ ಇಷ್ಟವಾಗುವುದಿಲ್ಲ ಹೇಳಿ?

costume-suresh-stanleyಇಂತಹ ಸುಂದರ ವೇಷ-ಭೂಷಣಗಳನ್ನು ಒದಗಿಸುವ ಕೇಂದ್ರಗಳು ಬೆಂಗಳೂರಿನಲ್ಲಿ ಬಹಳಷ್ಟಿವೆ. ಅವುಗಳಲ್ಲಿ ಉನ್ನತ ಸ್ಥಾನ ಪಡೆದಿರುವ ಕೇಂದ್ರ “ಭರತಾಂಜಲಿ ಕಾಸ್ಟೂಮ್ಸ್” ಉದ್ಯಾನನಗರಿ, ವಿಜಯನಗರದಲ್ಲಿ ಸ್ಥಾಪಿತವಾಗಿರುವ ಭರತಾಂಜಲಿ ಕಾಸ್ಟೂಮ್ಸ್ ಅತ್ಯಂತ ಬೇಡಿಕೆಯಲ್ಲಿರುವ ಕಾರ್ಯಾಗಾರ, ಭರತನಾಟ್ಯ, ಕೂಚುಪುಡಿ, ಕಥಕ್, ಈ ಎಲ್ಲಾ ಪ್ರಕಾರಗಳಿಗೆ ಹೊಂದುವಂತಹ ವೇಷಭೂಷಣಗಳ ರಹಸ್ಯವೇ ಅದರ ಸ್ವಾರಸ್ಯ.
ಬೆಂಗಳೂರಿನ ಅಷ್ಟೇ ಯಾಕೆ, ದೇಶಾದ್ಯಂತ ಅಲ್ಲದೆ ಅಮೇರಿಕ, ದುಬೈ, ಕೆನಡಾ ಹೀಗೆ ಹಲವಾರು ರಾಷ್ಟ್ರಗಳಿಗೆ ತಮ್ಮ ಗರಿಗಳನ್ನು ಹರಡಿ

ನೂರಾರು ನರ್ತಕರಿಗೆ, ಗುರುಗಳಿಗೆ, ನೃತ್ಯಶಾಲೆಗೆ ವೇಷಭೂಷಣಗಳನ್ನು ಅಂದಕ್ಕೆ ಹೊಂದುವ ಆಭರಣಗಳನ್ನು ಒದಗಿಸುವಲ್ಲಿ ಶ್ರೀಮತಿ ಸೀತಾ ಗುರುಪ್ರಸಾದ್ ರವರು ತಮ್ಮ ಬುದ್ದಿ ಕೌಶಲ್ಯವನ್ನು, ಸೃಜನಾತ್ಮಕತೆಯನ್ನು ಬಳಸಿ ಗ್ರಾಹಕರಿಗೆ ಇಷ್ಟವಾಗುವ ಒಪ್ಪಿಗೆಯಾಗುವ ರೀತಿಯಲ್ಲಿ ವೇಷಭೂಷಣಗಳನ್ನು ಹೊಲೆಸಿಕೊಡುತ್ತಾರೆ. ಶ್ರೀಮತಿ ಸೀತಾ ಮತ್ತು ಅವರ ಪತಿ ಶ್ರೀ ಗುರುಪ್ರಸಾದ್ ರವರು ಮಳಿಗೆಯ ಸಮಸ್ತ ಜವಾಭ್ದಾರಿ ಹೊತ್ತು ಸಹನೆ, ಪ್ರೀತಿ, ಗೌರವದರಗಳಿಂದ ಬಂದ ಎಲ್ಲಾ ಗ್ರಾಹಕರನ್ನು ನಡೆಸಿಕೊಳ್ಳುತ್ತಾರೆ. ಭರತಾಂಜಲಿ ಕಾಸ್ಟೂಮ್ಸ್ ನ ಇಡೀ ತಂಡ ಕಲಾಸೇವೆಯಲ್ಲಿ ಅವಿರತ ತೊಡಗಿಸಿಕೊಂಡಿದ್ದಾರೆ.

ಸುರೇಶ್ ಸ್ಟಾನ್ಲೆ

Leave a Comment