ನಾಟಕ ಪ್ರದರ್ಶನದಿಂದ ಗಡಿಭಾಗದ ಜನರಲ್ಲಿ ಸಂತಸ

ಬಳ್ಳಾರಿ, ಸೆ.4: ಪೌರಾಣಿಕ ನಾಟಕ ಪ್ರದರ್ಶನದಿಂದ ಗಡಿಭಾಗದ ಜನರಿಗೆ ಬಹಳ ಸಂತೋಷಕರವಾಗಿದೆ. ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಹಳ್ಳಿ ಹಳ್ಳಿಗೂ ತಲುಪಿಸುವ ಜವಾಬ್ದಾರಿ ಕಲಾವಿದರು ಮತ್ತು ಸಂಘ ಸಂಸ್ಥೆಗಳು ವಹಿಸಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಚಂದ್ರಯ್ಯಸ್ವಾಮಿ ಕರೆ ನೀಡಿದರು.

ಅವರು ನಿನ್ನೆ ಇಲ್ಲಿಗೆ ಸಮೀಪದ ಎತ್ತಿನಬೂದಿಹಾಳ್ ಗ್ರಾಮದ ಶ್ರೀ ಕಟ್ಟೇ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸಹನಾ ಕಲಾಟ್ರಸ್ಟ್‍ನಿಂದ ನಡೆದ ವೀರಾಭಿಮನ್ಯು ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೆಲ, ಜಲ, ಕಲೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪೋಷಿಸಬೇಕು . ಹಾಗಾದಾಗ ಮಾತ್ರ ಮನುಷ್ಯರಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆಂದರು.

ನಾಟಕ ನಿರ್ದೇಶಕ ಹಂದಿಹಾಳು ಕೆ.ಪರಶುರಾಮ ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್‍ಗಳ ಹಾವಳಿ ಹೆಚ್ಚಾಗಿದ್ದರಿಂದ ಪಟ್ಟಣಗಳಲ್ಲಿ ನಾಟಕ ಪ್ರೇಕ್ಷಕರು ಬಹಳ ಕಡಿಮೆಯಾಗುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ನಾಟಕ ನೋಡಲು ಇಂದಿಗೂ ಜನರು ಬಹಳ ಉತ್ಸುಕರಾಗಿ ಬರುತ್ತಾರೆ. ನಾವು ಇನ್ನೂ ಹೆಚ್ಚಾಗಿ  ಗಡಿ ಭಾಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕೆಂದರು.

ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಮತ್ತು ನಿರ್ದೇಶಕ ಕೆ.ಪರಶುರಾಮ ಹಂದಿಹಾಳು ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿವನಗೌಡ, ಪತ್ರಕರ್ತ ಟಿ.ನಾಗಭೂಷಣ, ಕನ್ನಡ ಉಪನ್ಯಾಸಕಎ.ಎಂ.ಪಿ.ವೀರೇಶಸ್ವಾಮಿ, ಟ್ರಸ್ಟ್‍ನ ಅಧ್ಯಕ್ಷ ಪಲ್ಲೇದ ನಾಗರಾಜ ಸಿರಿವಾರ ಹಾಗೂ ನೂರಾರು ಪ್ರೇಕ್ಷಕರು ಉಪಸ್ಥಿತರಿದ್ದರು. ಪ್ರದರ್ಶನಗೊಂಡ ವೀರಾಭಿಮನ್ಯು ಪೌರಾಣಿಕ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.

Leave a Comment