ನಾಟಕ, ಚಿತ್ರರಂಗಕ್ಕೆ ತನ್ನದೇ ಛಾಪು ಮೂಡಿಸಿದ್ದ ಕಾರ್ನಾಡ್

ಚಾಮರಾಜನಗರ ಜೂ.14- ಸೃಜನ ಶೀಲ ಬರವಣಿಗೆ ನಟನೆ ನಿರ್ದೇಶನ ಮುಂತಾದ ಹಲವು ಕ್ಷೇತ್ರಗಳಲ್ಲಿ ಪರಿಣಿತ ರಾಗಿದ್ದ ಮೇರು ಸಾಹಿತಿ ನಾಟಕಕಾರ ಗಿರೀಶ್ ಕಾರ್ನಾಡ್‍ರು ನಾಟಕ ಮತ್ತು ಚಿತ್ರರಂಗ ಎರಡರಲ್ಲೂ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದರು ಇವರ ನಿಧನ ವಿಷಾದ ವೆನಿಸಿದರೂ . ಅವರು ಮಾಡಿಹೋದ ಉತ್ತಮ ಕಾರ್ಯಗಳು ಅವರನ್ನು ಜೀವಂತ ವಿರಿಸುತ್ತದೆ ಎಂದು ರಂಗತಜ್ಞ ಕೆ.ವೆಂಕಟರಾಜುಸ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಇತ್ತಿಚೆಗೆ ನಿಧನರಾದ ಖ್ಯಾತ ನಾಟಕಕಾರ, ಸಾಹಿತಿ ಗಿರೀಶ್‍ಕಾರ್ನಾಡ್ ಮತ್ತು ಜಾನಪದ ಕಲಾವಿದ ಪುಟ್ಟಮಲ್ಲೇಗೌಡರಿಗೆ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ನಾಡ್‍ರ ಹಲವು ನಿಲುವುಗಳಿಂದ ಟೀಕೆಗಳಿಗೆ ಒಳಗಾದರೂ, ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದ ಅವರ ಗುಣ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು ಎಂದು ತಿಳಿಸಿದರು.
ಜಾನಪದ ಕಲಾವಿದ ಗೊರವರ ಕುಣಿತದ ಪುಟ್ಟಮಲ್ಲೇಗೌಡರ ಕುರಿತು ಮಾತನಾಡಿದ ಗಾಯಕ ಸಿ.ಎಂ. ನರಸಿಂಹಮೂರ್ತಿ ಪುಟ್ಟಮಲ್ಲೇಗೌಡರು ಅಸಾಮಾನ್ಯ ಕಲಾವಿದರಾಗಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರುಸ ಪ್ರಶಸ್ತಿಗಳನ್ನು ಪಡೆದಿದ್ದರೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇಳಿ ವಯಸಿನಲ್ಲೂಸ ಅವರು ತಮ್ಮ ಕಲೆಯ ಮೇಲಿನ ಉತ್ಸಾಹ ಕಳೆದು ಕೊಂಡಿರಲಿಲ್ಲ ಇಂತಹ ಕಲಾವಿದರು ತಮ್ಮ ಸಾವಿನವರೆಗೂ ಸ್ವಂತ ಮನೆಯನ್ನು ಹೊಂದಲಾಗದೇ ಇದ್ದದ್ದು ವಿಷಾದನೀಯ, ಕಲಾವಿದರಿಗೂ ಕಾರ್ಮಿಕರಿಗೆ ಇರುವಂತೆ ವಿವಿದ ಸೌಲಭ್ಯಗಳು ದೊರೆಕಬೇಕು ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್.ವಿನಯ್ ಮಾತನಾಡಿ ಬದಿಕಿನಲ್ಲಿ ನಡೆಯುವ ಕೆಲವು ಅನಿರಿಕ್ಷಿತ ಘಟನೆಗಳಿಂದಲೇ ತಿರುವುಗಳಿಂದಲೇ ಮಾನವನ ಜನನ, ಏಳಿಗೆ ಪ್ರತಿಭೆಗಳು ಬದಿಕಿನಲ್ಲಿ ಏಳುಸ ಬೀಳುಗಳು ಕಂಡು ಅವರ ಪ್ರತಿಭೆಗೆ ಹೊಳಪು ನೀಡಿತು, ಪುಟ್ಟಮಲ್ಲೇಗೌಡರು ಉತ್ತಮ ಜಾನಪದ ಕಲಾವಿದರಾಗಿ ಜನಪದ ಕಲೆಯ ಉಳಿವಿಗೆ ತಮ್ಮದೇ ಕೊಡುಗೆಯನ್ನು ನೀಡಿ ಅದರ ಮೂಲಕ ಇನ್ನು ಜೀವಂತವಾಗಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಟಿ.ಬಂಗಾರಗಿರಿನಾಯಕ, ಡಾ.ಜಯಣ್ಣ, ಕೆ.ಎಂ.ವೀರಶೆಟ್ಟಿ, ವಾಸಂತಿ, ಗುರುಮಲ್ಲಮ್ಮ, ರಾಧಗುರುರಾಜು, ಪರಶಿವಮೂರ್ತಿ, ಬಸವನಾಯಕ, ಕೃಷ್ಣಸ್ವಾಮಿನಾಯಕ, ನಾಗನಂದನಾ, ನವೀನ್‍ಕುಮಾರ್, ಸುರೇಶ್, ವೆಂಕಟೇಶ್‍ಬಾಬು, ಮಹದೇವಸ್ವಾಮಿ, ಮೂಜುನಾಥ್, ಎ.ಜಿ.ಬಸವಣ್ಣ, ಮುಕುಂದರಾಜು, ಸಿದ್ದಮಲ್ಲಪ್ಪ, ಶಿವಪ್ರಸಾದ್, ಸಿ.ಎಸ್.ಮಂಜುಳ, ಹಾಗೂ ಇನ್ನು ಮುಂತಾದರು ಹಾಜರಿದ್ದರು.

Leave a Comment