ನಾಗಿಣಿ 1000 ಕಂತು ಯಶಸ್ವಿ

ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಠಸಿದ ನಾಗಿಣಿ ಧಾರಾವಾಹಿ ಇದೀಗ 1000 ಕಂತುಗಳನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸಿದೆ.

2016ರ ಫೆಬ್ರವರಿಯಲ್ಲಿ ಆರಂಭವಾದ ನಾಗಿಣಿ ದಿನದಿಂದ ದಿನಕ್ಕೆ ಕನ್ನಡ ಪ್ರೇಕ್ಷಕರನ್ನು ಮನಸೂರೆಗೊಂಡು ಮುನ್ನುಗಿ ಇದೀಗ 1000 ಕಂತು ಪೂರೈಸುವ ಮೂಲಕ ಗಮನ ಸೆಳೆದಿದೆ. ಕನ್ನಡ ಕಿರುತೆರೆ ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲದಿಂದ ಈ ಅತೀಂದ್ರಿಯ ಶೋ ಸಾಧನೆ ನಿಜಕ್ಕೂ ಅದ್ಭುತ, ಇದರೊಂದಿಗೆ, ಈ ಡಿಸೆಂಬರ್ ನಿಂದ ಹೊಸ ತಾರಾಗಣದೊಂದಿಗೆ ಜೀ ಕನ್ನಡ ವೀಕ್ಷಕರಿಗೆ ಹೊಸ ಅನುಭವ ನೀಡಲು ನಾಗಿಣಿ ಧಾರಾವಾಹಿ ಸಿದ್ಧವಾಗುತ್ತಿದೆ.

ಕೃಷ್ಣ ಛಾಯಾ ಚಿತ್ರ ನಿರ್ಮಾಣದ ಮತ್ತು ಹಯವದನ ನಿರ್ದೇಶನದ, ಈ ಧಾರಾವಾಹಿಯ ಬಗ್ಗೆ ವಾಹಿನಿಯನ್ನು ದೃಢವಾಗಿಸುವುದರೊಂದಿಗೆ, ಜೀ ಕನ್ನಡ ಇಂತಹ ವಿಶಿಷ್ಟ ಕಥಾಹಂದರದೊಂದಿಗೆ ಮೆಚ್ಚಿನ ಮನರಂಜನೆಯ ತಾಣವಾಗಿದೆ. ೩ ವರ್ಷಗಳ ಅವಧಿಯಲ್ಲಿ, ಶೋ ಅತ್ಯಧಿಕ ವೀಕ್ಷಕ ವಲಯ ಹೊಂದುವುದನ್ನು ಮುಂದುವರೆಸಿದ್ದು, ನಾಗಿಣಿ ತಂಡ ಅಮೃತಾ (ದೀಪಿಕಾ) ಮತ್ತು ಅರ್ಜುನ್ (ದೀಕ್ಷಿತ್) ಜೀವನದ ಪ್ರತಿಯೊಂದು ಹಂತವನ್ನೂ ಮುನ್ನಡೆಸಲು ಸ್ಫೂರ್ತಿ ನೀಡಿದೆ.

ನಾಗಿಣಿಯಾಗಿ ನಮ್ರತಾ ಗೌಡ ?
ಇನ್ನು ಸೇಡು ತೀರಿಸಿಕೊಳ್ಳಲು ನಾಗಿಣಿ ಮತ್ತೊಮ್ಮೆ ಭೂಮಿಗೆ ಎಂದು ಈಗಾಗಲೇ ವಾಹಿನಿಯಲ್ಲಿ ಪ್ರೋಮೋ ಸಕತ್ ಕುತೂಹಲ ಕೆರೆಳಿಸಿದೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಗಮನ ಸೆಳೆದಿದ್ದ ನಮ್ರತಾ ಗೌಡ ನಾಗಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಪುಟ್ಟಗೌರಿ ಮದುವೆ ಆದ್ಮೇಲೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಹಿಮಾ ಅಲಿಯಾಸ್ ನಮ್ರತಾ ಗೌಡ ಇದೀಗ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ’ನಾಗಿಣಿ’ಯಾಗಿ ನಮ್ರತಾ ಗೌಡ ಬುಸುಗುಡಲಿದ್ದಾರೆ. ಹೌದು, ಹೆಣ್ಣು ಸರ್ಪದ ಸೇಡಿನ ಕಥೆ ಹೊಂದಿರುವ ’ನಾಗಿಣಿ’ ಧಾರಾವಾಹಿ ಇನ್ನೇನು ಮುಗಿಯುವ ಹಂತ ತಲುಪಿದೆ. ಇದೀಗ ಹೊಸ ನಾಗಿಣಿಯಲ್ಲಿ ಮಿಂಚಲಿರುವ ನಮ್ರತಾ ಗೌಡ ಪದವೀಧರೆ. ಚಿಕ್ಕವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಮ್ರತಾ ಗೌಡ ಮಿಲನ, ಗೇಮ್, ತುತ್ತೂರಿ ಸಿನಿಮಾಗಳಲ್ಲಿ ನಟಿಸಿದ್ದರು. ಕ್ಲಾಸಿಕಲ್ ಡ್ಯಾನ್ಸರ್ ಕೂಡ ಆಗಿರುವ ನಮ್ರತಾ ಗೌಡ ’ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಇದೀಗ ನಾಗಿಣಿಯಾಗಿ ಎಷ್ಟು ಖ್ಯಾತಿ ಪಡೆಯಲಿದ್ದಾರೆ ಎಂದು ಭಾರಿ ಕುತೂಹಲ ಮೂಡಿಸಿದೆ. ಶೀಘ್ರವೇ ಬರುತ್ತಿರುವ ನಾಗಿಣಿ ೨ ಮುಂದಿನ ಅಧ್ಯಾಯ ವೀಕ್ಷಿಸಲು ಜೀ ಕನ್ನಡ ಗೆ ಟ್ಯೂನ್ ಇನ್ ಮಾಡಿ.

Leave a Comment